ಝುಬೈದಾ ಕೊಲೆ ಪ್ರಕರಣ : 4ನೇ ಆರೋಪಿ ಕೋರ್ಟಿಗೆ ಹಾಜರು

ಕರಾವಳಿ ಅಲೆ ವರದಿ

ಕಾಸರಗೋಡು : ಪೆರಿಯ ಸಮೀಪದ ಆಯಿಂಪರ ವಿಲ್ಲರಂಪದಿ ರಸ್ತೆಯ ಸುಬೈದಾಳನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಈತನಕ ತಲೆಮರೆಸಿಕೊಂಡಿದ್ದ 4ನೇ ಆರೋಪಿ ಹೊಸದುರ್ಗ ಪ್ರಥಮ ಮೆಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಹಾಜರಾಗಿದ್ದಾನೆ.

ನೀರ್ಚಾಲ್ ನಿವಾಸಿ ಅರ್ಶಾದ್ ಎಂಬಾತ ನ್ಯಾಯಾಲಯದಲ್ಲಿ ಹಾಜರಾದ ಆರೋಪಿ. ಬಳಿಕ ಆರೋಪಿಯನ್ನು ನ್ಯಾಯಾಲಯದ ನಿರ್ದೇಶನದಂತೆ 2 ವಾರ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ. ಇನ್ನೊಂದೆಡೆ ಸುಬೈದಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿರುವ ಇಬ್ಬರು ಆರೋಪಿಗಳನ್ನು ಪ್ರಸ್ತುತ ಪ್ರಕರಣದ ಹೆಚ್ಚಿನ ತನಿಖೆಗಾಗಿ ನ್ಯಾಯಾಲಯ 2 ದಿನಗಳ ತನಕ ಪೆÇಲೀಸರ ವಶಕ್ಕೆ ಬಿಟ್ಟುಕೊಟ್ಟಿದೆ.

ಮಧೂರು ಪಟ್ಲ ಕುಂಜರು ಕೋಟಕಣಿ ನಿವಾಸಿ ಅಬ್ದುಲ್ ಖಾದರ್ ಕೆ ಎಂ ಅಲಿಯಾಸ್ ಖಾದರ್ ಹಾಗೂ ಮಧೂರು ಪಟ್ಲ ಕುದ್ರೆಪ್ಪಾಡಿಯ ಅಬ್ದಿಲ್ ಅಸೀಸ್ ಟಿ ಆಲಿಯಾಸ್ ಬವ ಆಲಿಯಾಸ್ ಎನ್ನುವವರನ್ನು ಫೆಬ್ರವರಿ 8ರಂದು ಮೆಜಿಸ್ಟ್ರೇಟರ ಸಾನಿಧ್ಯದಲ್ಲಿ ಸಾಕ್ಷಿದಾರರಿಂದ ಗುರುತು ಹಚ್ಚುವ ಪರೇಡಿಗೊಳಪಡಿಸಲಾಗಿತ್ತು. ಪರೇಡಿನಲ್ಲಿ ಸಾಕ್ಷಿದಾರರು ಈ ಇಬ್ಬರು ಆರೋಪಿಗಳ ಗುರುತು ಪತ್ತೆ ಹಚ್ಚಿದ್ದರು. ಜನವರಿ 17ರಂದು ಮಧ್ಯಾಹ್ನ ಸುಬೈದಾರನ್ನು ಅವರ ಮನೆಯೊಳಗೆ ಕ್ಲೋರೋಫಾಂ ಬಳಸಿ ಪ್ರಜ್ಞಾಹೀನಗೊಳಿಸಿದ ಬಳಿಕ ಉಸಿರುಗಟ್ಟಿಸಿ ಕೊಲೆಗೈಯ್ಯಲಾಗಿತ್ತು.

LEAVE A REPLY