ವರದಿಗಾರನಿಗೆ ರಾಜೀನಾಮೆ ಕೊಡಹೇಳಿದ ಝೀ ನ್ಯೂಸ್

mahinder-zee

ಮುಂಬೈ : ಇತ್ತೀಚೆಗೆ ಹರ್ಯಾಣ  ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರಿಗೆ ರಾಜ್ಯದ ಝೀ ನ್ಯೂಸ್ ವರದಿಗಾರ ಮಹೇಂದರ್ ಸಿಂಗ್ ಕೇಳಿದ ಮುಜುಗರವುಂಟು ಮಾಡುವಂತಹ ಪ್ರಶ್ನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರದ ಬೆಳವಣಿಗೆಯಲ್ಲಿ ತಾನು ಕೂಡಲೇ ರಾಜೀನಾಮೆ ನೀಡಬೇಕೆಂದು ಝೀ ನ್ಯೂಸ್ ವಾಹಿನಿ ಆಡಳಿತ ತನಗೆ ಆದೇಶಿಸಿದೆ ಎಂದು ವರದಿಗಾರ ಆರೋಪಿಸಿದ್ದಾರೆ.