ನಡುಪದವು ಪರಿಸರದಲ್ಲಿ ತಲ್ವಾರ್ ಹಿಡಿದು ಓಡಾಟ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ನಗರದ ಹೊರವಲಯದ ಕೊಣಾಜೆ ಠಾಣಾ ವ್ಯಾಪ್ತಿಯ ನಡುಪದವು ಎಂಬಲ್ಲಿ ಇತ್ತೀಚೆಗೆ ನಡೆದ ಕಳ್ಳತನ ಪ್ರಕರಣದ ಹಿನ್ನೆಲೆಯಲ್ಲಿ ಜನ ಆತಂಕಗೊಂಡಿದ್ದರೆ, ಶನಿವಾರ ಮೂವರು ಯುವಕರು ತಲವಾರು ಹಿಡಿದು ತಿರುಗಾಡುತ್ತಿದ್ದಾರೆ ಎನ್ನುವ ಸುದ್ದಿ ಇನ್ನಷ್ಟು ಆತಂಕಕ್ಕೆ ಕಾರಣವಾಯಿತು.

ಈ ಹಿನ್ನೆಲೆಯಲ್ಲಿ 100ಕ್ಕೂ ಅಧಿಕ ಮಂದಿ ಸಾರ್ವಜನಿಕರು ಒಟ್ಟು ಸೇರಿ ಇವರನ್ನು ಹುಡುಕಾಡಿದ ಘಟನೆ ನಡೆಯಿತು.

ನಡುಪದವು ಖಾಸಗಿ ಎಂಜಿನಿಯರಿಂಗ್ ಕಾಲೇಜಿನ ಮೈದಾನದಲ್ಲಿ ಮೂವರು ಅಪರಿಚಿತ ಯುವಕರು ತಲವಾರು ಹಿಡಿದುಕೊಂಡು ತಿರುಗಾಡುತ್ತಿರುವುದನ್ನು ಸ್ಥಳೀಯ ವ್ಯಕ್ತಿಗಳು ಗಮನಿಸಿದ್ದರು. ಇವರು ಯಾವುದೋ ದುಷ್ಕøತ್ಯ ನಡೆಸಲು ಹೊಂಚು ಹಾಕಿದ್ದಾರೆ ಎನ್ನುವ ಸುದ್ದಿ ವ್ಯಾಪಕವಾಗಿ ಹರಡಿ ಪರಿಸರದಲ್ಲಿ ನೂರಕ್ಕೂ ಹೆಚ್ಚು ಜನ ಸೇರಿ ಹುಡುಕಾಡ ತೊಡಗಿದ್ದಾರೆ.

ಆದರೆ ಆಗಂತುಕರು ಈ ವಿಚಾರವನ್ನು ತಿಳಿದು ಅದಾಗಲೇ ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ.

ಕೊಣಾಜೆ ಠಾಣಾ ಪೊಲೀಸರು ಕೂಡಾ ಅಲ್ಲಿಗೆ ಆಗಮಿಸಿ ಅವರನ್ನು ಹುಡುಕಾಡಲು ಯತ್ನಿಸಿದರು.

ಸ್ಥಳೀಯ ಎರಡು ಮನೆಗಳಲ್ಲಿ ಕಳ್ಳತನ ನಡೆದಿದ್ದರೆ, ಇನ್ನೆರಡು ಮನೆಗಳಲ್ಲಿ ಕಳವು ಯತ್ನ ನಡೆದಿತ್ತು. ಇದೇ ಕಳ್ಳರು ತಲವಾರು ಹಿಡಿದು ಹೊಂಚು ಹಾಕುತ್ತಿರಬಹುದು ಎಂದು ಜನತೆ ಸಂಶಯ ವ್ಯಕ್ತಪಡಿಸಿದ್ದಾರೆ.