ಮದ್ಯದ ನಶೆಯಲ್ಲಿ ಪೊಲೀಸನ ಬೈಕನ್ನೇ ಕದ್ದ ಯುವಕ !

 ಹಾಸನ : ಇತ್ತೀಚೆಗೆ ಹಾಸನದಲ್ಲಿ ನಡೆದ ತಮಾಷೆಯ ಘಟನೆಯೊಂದರಲ್ಲಿ ಮದ್ಯದ ನಶೆಯಲ್ಲಿದ್ದ ಯುವಕನೊಬ್ಬ ಪೊಲೀಸನೊಬ್ಬನ ಬೈಕನ್ನು ಕದ್ದು  ನಿರ್ಭಯದಿಂದ ಚಲಾಯಿಸಿಕೊಂಡು ಹೋಗಿದ್ದಾನೆ. ಅಷ್ಟೇ ಅಲ್ಲ ಪೊಲೀಸನ ಟೋಪಿ ಕೂಡ ಆತನ ಪಾಲಾಗಿದ್ದು, ಯಾವುದರ ಪರಿವೆಯೇ ಇಲ್ಲದೆ ನಗುತ್ತಾ ಮುಂದೆ ಸಾಗಿದ್ದಾನೆ. ಈ ಘಟನೆಯ ವಿಡಿಯೋ ಒಂದನ್ನು ಸುದ್ದಿ ಸಂಸ್ಥೆಯೊಂದು ಪೋಸ್ಟ್ ಮಾಡಿದೆ.

ಈ ಯುವಕ ಸುಮಾರು ಒಂದು ಕಿಲೋಮೀಟರ್ ದೂರ ಸಾಗಿದರೂ ಸಿಗ್ನಲ್ ಒಂದರ ಬಳಿ ಬೈಕ್ ನಿಲ್ಲಿಸಲೇಬೇಕಾಗಿದ್ದು, “ಸೂಪರ್ ಸ್ಟಾರ್ ರಜನೀಕಾಂತ್” ಎಂದು ಆತ ಜೋರಾಗಿ ಹೇಳುತ್ತಿರುವುದೂ ಕೇಳಿಸುತ್ತದೆ. ಆತನನ್ನು ನೋಡಿದ ಪೊಲೀಸ್ ಸಿಬ್ಬಂದಿಯೊಬ್ಬರು ತಮ್ಮ ಬೈಕಿನಿಂದಿಳಿದು ಆತನ ಬೈಕನ್ನು ಹಿಂದಿನಿಂದ ಎಳೆದು ನಿಲ್ಲ್ಲಿಸಲು ಯತ್ನಿಸುತ್ತಿರುವುದೂ ವಿಡಿಯೋದಲ್ಲಿ ಕಾಣಿಸುತ್ತದೆ.