ಕಲ್ಲಾಪುವಿನಲ್ಲಿ ಯುವಕನಿಗೆ ಚೂರಿ ಇರಿತ

ಸಾಂದರ್ಭಿಕ ಚಿತ್ರ

ಮಂಗಳೂರು : ನಗರ ಹೊರವಲಯದ ಉಳ್ಳಾಲದ ಕಲ್ಲಾಪು ಮುಡಿಕೋಡಿ ಎಂಬಲ್ಲಿ ಆಟವಾಡುವ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ಯುವಕನೊಬ್ಬ ತನ್ನ ನೆರೆಮನೆಯ ಯುವಕ ಶ್ರಾವಣ್ (18) ಎಂಬಾತನಿಗೆ ಚೂರಿ ಇರಿದಿದ್ದಾನೆ. ಗಂಭೀರ ಗಾಯಗೊಂಡಿರುವ ಈತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನೆರೆಮನೆಯ ಮುಝಫರ್ ಎಂಬಾತ ಚೂರಿಯಿಂದ ತಿವಿದು ಗಾಯಗೊಳಿಸಿದ ಆರೋಪಿ. ಕಲ್ಲಾಪು ಸಮೀಪದ ಮೈದಾನದಲ್ಲಿ ಕ್ರಿಕೆಟ್ ಆಟವಾಡುವ ಸಂದರ್ಭದಲ್ಲಿ ಕ್ಷುಲ್ಲಕ ವಿಚಾರದಲ್ಲಿ ಇಬ್ಬರು ಯುವಕರ ನಡುವೆ ಗಲಾಟೆ ನಡೆದಿತ್ತು. ಬಳಿಕ ಮನೆ ಕಡೆಗೆ ತೆರಳುತ್ತಿದ್ದಾಗ ಮತ್ತೆ ಎದುರಾದ ಮುಝಫರ್ ತನ್ನ ಬಳಿ ಇದ್ದ ಚೂರಿಯಿಂದ ಶ್ರಾವಣ್ ಬೆನ್ನಿನ ಹಿಂಭಾಗಕ್ಕೆ ಚೂರಿಯಿಂದ ಇರಿದು ಗಾಯಗೊಳಿಸಿದ್ದಾನೆ. ಗಾಯಗೊಂಡ ಶ್ರವಣನನ್ನು ದೇರಳಕಟ್ಟೆ ಆಸ್ಪತ್ರೆಗೆ ದಾಖಲಿಸಲಾಗಿದೆ.