ಪಾಳು ಬಾವಿಗೆ ಬಿದ್ದ ಯುವಕನ ರಕ್ಷಣೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ರಾತ್ರಿ ವೇಳೆ ಶಂಕಾಸ್ಪದ ರೀತಿಯಲ್ಲಿ ಪಾಳು ಬಾವಿಗೆ ಬಿದ್ದ ಯುವಕನನ್ನು ಕಾಸರಗೋಡು ಅಗ್ನಿಶಾಮಕ ದಳ ರಕ್ಷಿಸಿದೆ.

ತಿರುವನಂತಪುರ ಆಟ್ಟಿಂಗಾಲ್ ನಿವಾಸಿ ಸಾಬು(40)ನನ್ನು ರಕ್ಷಿಸಲಾಗಿದೆ. ದೇಳಿ ಜಂಕ್ಷನ್ ಬಳಿಯ ಖಾಸಗಿ ಹಿತ್ತಿಲಿನಲ್ಲಿರುವ ಬಾವಿಗೆ ಬಿದ್ದಿದ್ದು, ಬಾವಿಯಿಂದ ಆರ್ತನಾದ ಕೇಳಿ ಬಂದದ್ದರಿಂದ ಸ್ಥಳೀಯರು ಪೆÇಲೀಸರಿಗೆ ಮಾಹಿತಿ ನೀಡಿದರು. ಪೆÇಲೀಸರು ನೀಡಿದ ಮಾಹಿತಿಯಂತೆ ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ ರಕ್ಷಿಸಿತು. ಈತ ಬಾವಿಗೆ ಬೀಳಲು ಕಾರಣದ ಬಗ್ಗೆ ತನಿಖೆ ನಡೆಸಲು ಬೇಕಲ ಪೆÇಲೀಸರು ಈತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.