ತೋರಣ ಕಟ್ಟುವ ವಿಷಯದಲ್ಲಿ ಘರ್ಷಣೆ : ಯುವಕ ಆಸ್ಪತ್ರೆಗೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಎಡನೀರು ಮಠದ ಬಳಿ ರಸ್ತೆಯಲ್ಲಿ ತೋರಣ ಕಟ್ಟುವ ವಿಷಯದಲ್ಲಿ ಉಂಟಾದ ಘರ್ಷಣೆಯಲ್ಲಿ ಯುವಕನೊಬ್ಬ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾನೆ.

ಎಡನೀರು ಅಮ್ಮಂಗಯ ನಿವಾಸಿ ಶಿವಪ್ರಸಾದ್ (25) ಎಂಬಾತ ಘರ್ಷಣೆಯಲ್ಲಿ ಗಾಯಗೊಂಡಿದ್ದು ಆತನನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಆತ ನೀಡಿದ ದೂರಿನಂತೆ ಸುಕುಮಾರನ್, ರಾಜೇಶ್, ನಿತೀಶ್, ರತೀಶ್, ದಯಾನಂದ ಮೊದಲಾದವರ ವಿರುದ್ಧ ವಿದ್ಯಾನಗರ ಪೆÇಲೀಸರು ದೂರು ದಾಖಲಿಸಿಕೊಂಡಿದ್ದಾರೆ.