ಕಿನ್ನಿಗೋಳಿ ಸಂತೆಯಲ್ಲಿ ಟಾರ್ಪಾಲು ಕಟ್ಟುವಾಗ ವಿದ್ಯುತ್ ಪ್ರವಹಿಸಿ ಗಾಯ

ನಮ್ಮ ಪ್ರತಿನಿಧಿ ವರದಿ

ಮುಲ್ಕಿ : ಕಿನ್ನಿಗೋಳಿಯ ಗುರುವಾರ ಸಂತೆಯಲ್ಲಿ ಅಂಗಡಿ ಇಡಲು ವಿದ್ಯುತ್ ಕಂಬಕ್ಕೆ ಟಾರ್ಪಾಲು ಕಟ್ಟುವಾಗ ವಿದ್ಯುತ್ ಪ್ರವಹಿಸಿ ಕಿನ್ನಿಗೋಳಿ ಗುತ್ತಕಾಡು ಬಳಿಯ ನಿವಾಸಿ ನೂರು (39)ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕಿನ್ನಿಗೋಳಿ ಸಂತೆ ಪ್ರತೀ ಗುರುವಾರ ನಡೆಯುತ್ತಿದ್ದು ಸುಸಜ್ಜಿತ ಮಾರುಕಟ್ಟೆ ಇದ್ದರೂ ಗೊಂದಲದ ಗೂಡಾಗಿ ಪರಿಣಮಿಸಿದೆ. ರೈತರು ತಾವು ಬೆಳೆದ ಫಸಲನ್ನು ರಸ್ತೆಯಲ್ಲೇ  ಮಾರಾಟ ಮಾಡುತ್ತಿದ್ದು ಅಪಾಯಕಾರಿಯಾಗಿ ಪರಿಣಮಿಸಿದೆ.