ಕಾಳಿ ನದಿ ತೀರದಲ್ಲಿ ಯುವಕನ ಶವ ಪತ್ತೆ

ಕರಾವಳಿ ಅಲೆ ವರದಿ
ಕಾರವಾರ : ಇಲ್ಲಿನ ಕಾಳಿ ನದಿ ತೀರದಲ್ಲಿ ಯುವಕನೊಬ್ಬನ ಶವ ಸೋಮವಾರ ಪತ್ತೆಯಾಗಿದೆ.
ಬಿಣಗಾದ ನಿವಾಸಿಯಾದ ಬೋನಿ ಮೆನೇಜಸ್ ಎಂಬಾತನ ಶವ ಎಂದು ಗುರುತಿಸಲಾಗಿದೆ. ಈತನು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಆತನು ಈ ಹಿಂದೆ ಕೂಡ ಒಮ್ಮೆ ಆತ್ಮಹತ್ಯೆ ಮಾಡಲು ಪ್ರಯತ್ನಿಸಿ ವಿಫಲನಾಗಿದ್ದ ಎನ್ನಲಾಗಿದೆ. ಶವವನ್ನು ನಗರದ ಸಿವಿಲ್ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY