ನೇಣು ಬಿಗಿದು ಆತ್ಮಹತ್ಯೆ

ಸಾಂದರ್ಭಿಕ ಚಿತ್ರ

ಬಂಟ್ವಾಳ : ಇಲ್ಲಿನ ನಗರ ಠಾಣಾ ವ್ಯಾಪ್ತಿಯ ನರಿಕೊಂಬು ಗ್ರಾಮದ ಮೊಗರ್ನಾಡು ಎಂಬಲ್ಲಿ ಬುಧವಾರ ಶೇಖರ ಮೂಲ್ಯ ಎಂಬವರ ಪುತ್ರ ದೀಪಕ್ (24)  ಮರಕ್ಕೆ ನೇಣಿ ಬಿಗಿದು ಆತ್ಮಹತ್ಯೆಗೈದಿದ್ದಾನೆ.

ಮಂಗಳೂರಿನಲ್ಲಿ ಮರದ ಕೆಲಸಕ್ಕೆ ಹೋಗುತ್ತಿದ್ದ ಈತ ಕಳೆದೊಂದು ವಾರದಿಂದ ಬಹಳ ಖಿನ್ನತೆಗೊಳಗಾಗಿದ್ದ ಎನ್ನಲಾಗಿದೆ. ಬುಧವಾರ ಕೆಲಸಕ್ಕೆ ರಜೆ ಹಾಕಿದ್ದ ಈತ ಮನೆಯಲ್ಲೇ ಇದ್ದ. ಮನೆ ಮಂದಿ ಹೊರ ಹೋದ ಬಳಿಕ ಮನೆ ಪಕ್ಕದ ಮರಕ್ಕೆ ನೇಣು ಬಿಗಿದು ಈತ ಆತ್ಮಹತ್ಯೆಗೆ ಶರಣಾಗಿದ್ದಾನೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.