ಹೈಟೆನ್ಷನ್ ತಂತಿ ತಗುಲಿ ಒಬ್ಬ ಸಾವು, ಇನ್ನೊಬ್ಬ ಗಂಭೀರ

ಮಂಗಳೂರು : ನಗರದ ಹೊರವಲಯದ ಸುರತ್ಕಲ್ ಕಷ್ಣಾಪುರದಲ್ಲಿ ಹೈಟೆನ್ಷನ್ ವೈರ್ ತಾಗಿ ಯುವಕನೊಬ್ಬ ಸಾವನ್ನಪ್ಪಿ, ಇನ್ನೊಬ್ಬ ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಾವನ್ನಪ್ಪಿದ ಯುವಕ ಕೃಷ್ಣಾಪುರ ಏಳನೇ ಬ್ಳಾಕ್ ನಿವಾಸಿ ಇಬ್ರಾಹಿಂ (25). ಕೃಷ್ಣಾಪುರದ ಆರನೇ ಬ್ಲಾಕ್ ನಿವಾಸಿ ನಝೀರ್ ಗಾಯಗೊಂಡಾತ.

ಇವರಿಬ್ಬರು ಕೂಡಾ ಸ್ನೇಹಿತರಾಗಿದ್ದು, ಕೃಷ್ಣಾಪುರದ 7ನೇ ಬ್ಲಾಕಿನಲ್ಲಿ ಮೊಬೈಲ್ ಅಂಗಡಿಯನ್ನು ಇಟ್ಟುಕೊಂಡಿದ್ದಾರೆ. ಅಂಗಡಿಗೆ ಬೋರ್ಡ್ ಅಳವಡಿಸಲೆಂದು ಸಮೀಪದ ಹೈಟೆನ್ಶನ್ ಕಂಬದ ಮೇಲೆ ಹತ್ತಿದ್ದಾರೆ. ಈ ವೇಳೆ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.