ಯುವಕ ಸಮುದ್ರಪಾಲು

ನಮ್ಮ ಪ್ರತಿನಿಧಿ ವರದಿ

ಪಡುಬಿದ್ರಿ : ತೀರ ಬಡ ಕುಟುಂಬದ ಯುವಕನೊಬ್ಬ ಮೀನು ಹಿಡಿಯಲು ತನ್ನ ಗೆಳೆಯನೊಂದಿಗೆ ತೆರಳಿದ ವೇಳೆ ಸಮುದ್ರದ ತೆರೆಗೆ ಸಿಲುಕಿ ಕಡಲುಪಾಲಾಗಿದ್ದು, ಹುಟುಕಾಟ ನಡೆಯುತ್ತಿದೆ.

ಸಮುದ್ರದಲ್ಲಿ ಮುಳುಗಿ ನಾಪತ್ತೆಯಾದ ಯುವಕ ನಡಿಪಟ್ನ ನಿವಾಸಿ ಪ್ರಜ್ವಲ್ ಶೆಟ್ಟಿ (24). ಭಾನುವಾರ ದಿನವಾಗಿದ್ದರಿಂದ ನಾಲ್ಕು ಕಡೆಗಳ ಕಾರ್ಯಕ್ರಮಕ್ಕೆ ಮನೆಗೆ ಹೇಳಿಕೆ ಬಂದಿದ್ದರಿಂದ ಮನೆಮಂದಿ

ಒಂದು ಕಡೆಗಾದರೂ ಹೋಗಿ ಬಾ ಎಂದರೂ ಕೇಳದ ಈತ ಮನೆಯಲ್ಲೇ ಉಳಿದಿದ್ದ. ಮನೆಮಂದಿ ಸಂಬಂಧಿಗಳ ಮದುವೆಗೆ ತೆರಳಿದ್ದು ಈ ಸಂದರ್ಭ ಈತ ತನ್ನ ಮಿತ್ರನೊಂದಿಗೆ ಮೀನು ಹಿಡಿಯಲು ನೀರರು ಪಾಲಾಗಿದ್ದಾನೆ. ಸ್ಥಳಕ್ಕೆ ಬಂದ ಪಡುಬಿದ್ರಿ ಪೊಲೀಸರು ಪರೀಶಿಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.