ಶಂಕಿತ ಇಲಿ ಜ್ವರಕ್ಕೆ ಯುವಕ ಬಲಿ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಉಪ್ಪಿನಂಗಡಿ : ಶಿರಾಡಿ ಗ್ರಾಮದ ಬಾಗಿಲು ಗದ್ದೆ ಎಂಬಲ್ಲಿನ ನಿವಾಸಿ ಶಶಿ (23) ಎಂಬ ಯುವಕ ಶಂಕಿತ ಇಲಿ ಜ್ವರಕ್ಕೆ ಬಲಿಯಾಗಿದ್ದಾನೆ.

ಪೆÇಡಿಯ ಮುಗೇರ ಎಂಬವರ ಮಗನಾಗಿರುವ ಶಶಿ ಕಳೆದ ಒಂದು ವಾರದಿಂದ ಜ್ವರಕ್ಕೆ ತುತ್ತಾಗಿದ್ದು, ಮೊದಲ ಭಾಗದಲ್ಲಿ ಶಿರಾಡಿಯ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಔಷದೋಪಚಾರ ಪಡೆದುಕೊಂಡಿದ್ದರೆನ್ನಲಾಗಿದೆ. ಜ್ವರ ಇಳಿಮುಖವಾಗದ ಕಾರಣಕ್ಕೆ ನೆಲ್ಯಾಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ರಕ್ತ ಪರೀಕ್ಷೆ ನಡೆಸಿದಾಗಲೇ ಪ್ರಾಣಾಂತಿಕ ಜ್ವರದ ಲಕ್ಷಣಗಳು ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಶಶಿಯನ್ನು ಮಂಗಳೂರಿನ ಜಿಲ್ಲಾ ಆಸ್ಪತ್ರೆಗೆ ಬುಧವಾರದಂದು ದಾಖಲಿಸಲಾಗಿತ್ತಾದರೂ ಗುರುವಾರದಂದು ಅವರು ಸಾವನ್ನಪ್ಪಿದ್ದರೆಂದು ತಿಳಿದು ಬಂದಿದೆ.