ಹಾವು ಕಡಿದು ಯುವಕ ಸಾವು

ನಮ್ಮ ಪ್ರತಿನಿಧಿ ವರದಿ

ಮೂಡುಬಿದಿರೆ : ಇಲ್ಲಿನ ನಾಗರ ಕಟ್ಟೆ ಎಂಬಲ್ಲಿ ವಿಷ ಜಂತುಗಳನ್ನು ಹಿಡಿಯುವಲ್ಲಿ ಪ್ರವೀಣನಾಗಿದ್ದ ಯುವಕಗೆ ವಿಷ ಜಂತು ಕಡಿದು ಮೃತಪಟ್ಟಿದ್ದಾರೆ.

ಮೂಡುಬಿದಿರೆ ಅಲಂಗಾರು ನಿವಾಸಿ, ಪೈಟಿಂಗ್ ವೃತ್ತಿ ಮಾಡುತ್ತಿದ್ದ ಡಾಲ್ಫಿ ಡಿಸೋಜ (33) ಮೃತ ವ್ಯಕ್ತಿ. ಇವರು ಕಳೆದ ಹತ್ತು ವರ್ಷಗಳಿಂದ ಹಾವು ಹಿಡಿಯುವುದರಲ್ಲಿ ನಿಪುಣರಾಗಿದ್ದರು. ಮೂಡುಬಿದಿರೆ ಮಾತ್ರವಲ್ಲ ಇತರ ಕಡೆಗಳಲ್ಲೂ ವಿಷದ ಹಾವುಗಳನ್ನು ಹಿಡಿಯುವಲ್ಲಿ ಇವರು ಪ್ರಸಿದ್ಧಿಯಾಗಿದ್ದರು. ಶುಕ್ರವಾರ ಸಾಯಂಕಾಲ ಮೂಡುಬಿದಿರೆ ಅಲಂಗಾರು ರಾಜೇಂದ್ರ ಕಿಣಿ ಎಂಬವರ ಅಂಗಳಕ್ಕೆ ನಾಗರ ಹಾವೊಂದು ಬಂದಿದ್ದು, ಕೂಡಲೇ ಕಿಣಿಯವರು ಡಾಲ್ಫಿಯನ್ನು ಬೇಟಿಯಾಗಿ ಹಾವು ಹಿಡಿಯಲು ಮನೆಗೆ ಕರೆಸಿದ್ದರು.

ಡಾಲ್ಪಿ ಹಾವು ಹಿಡಿಯುವ ವೇಳೆ ಹಾವು ಡಾಲ್ಪಿಯವರ ಕೈಗೆ ಕಚ್ಚಿ ಗಾಯಗೊಳಿಸಿದೆ. ಕೂಡಲೇ ಡಾಲ್ಫಿಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮೃತ ಪಟ್ಟಿದ್ದಾರೆ. ಮೃತ ಡಾಲ್ಫಿ ಅವಿವಾಹಿತರು. ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

 

 

LEAVE A REPLY