ನ್ಯುಮೋನಿಯಾದಿಂದ ಯುವಕ ಮೃತ

ಮೃತ ಸಾದಿಕ್

ಮಂಜೇಶ್ವರ : ನ್ಯೂಮೋನಿಯಾ ಬಾಧಿಸಿ ಚಿಕಿತ್ಸೆಯಲ್ಲಿದ್ದ ಯುವಕ ಮೃತಪಟ್ಟ ಘಟನೆ ನಡೆದಿದೆ.

ಮೂಸೋಡಿ ನಿವಾಸಿ ಮುಹಮ್ಮದ್ ಸಾದಿಕ್ (27) ಮೃತ ವ್ಯಕ್ತಿ. ದುಬಾಯಲ್ಲಿ ಕೆಲಸದಲ್ಲಿದ್ದ ಸಾದಿಕ್ ಒಂದೂವರೆ ತಿಂಗಳ ಹಿಂದೆ ಊರಿಗೆ ಬಂದಿದ್ದರು. ಈ ಮಧ್ಯೆ ಜ್ವರ ಬಾಧಿಸಿ ಚಿಕಿತ್ಸೆ ಪಡೆದಿದ್ದರು. ಅನಂತರ ಜ್ವರ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಮಂಗಳೂರಿನ ಆಸ್ಪತ್ರೆಯಲ್ಲಿ ತಪಾಸಣೆಗೈದಾಗ ನ್ಯುಮೋನಿಯಾ ಬಾಧಿಸಿರುವುದು ತಿಳಿದುಬಂದಿತ್ತು. ಇದರಿಂದ 20 ದಿನಗಳಿಂದ ಚಿಕಿತ್ಸೆಯಲ್ಲಿದ್ದ ಈತ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ. ಸಾದಿಕಗೆ ಕಿಡ್ನಿ ಸಂಬಂಧ ತೊಂದರೆಯೂ ಇತ್ತೆಂದು ಸಂಬಂಧಿಕರು ತಿಳಿಸಿದ್ದಾರೆ.