ದೋಣಿ ಮಗುಚಿ ಯುವಕ ದುರ್ಮರಣ

 ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಶಿರಿಯಾ ಹೊಳೆಯಲ್ಲಿ ದೋಣಿ ಮಗುಚಿ ಯುವಕನೊಬ್ಬ ಮೃತಪಟ್ಟಿದ್ದು, ಜೊತೆಗಿದ್ದ ಇಬ್ಬರು ಪಾರಾದ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ.

ಶಿರಿಯಾ ಅಳಿವೆ ಬಾಗಿಲಿನ ಸಮೀಪ ಸೋಮವಾರ ಮಧ್ಯಾಹ್ನ 1 ಗಂಟೆ ವೇಳೆ ಅಪಘಾತ ನಡೆಯಿತು. ಆರಿಕ್ಕಾಡಿ ಕಡವತ್ ಚೆರಿಯ ಮೊಯ್ದೀನ್ ಪುತ್ರ ಮುನಾಸಿನ್ (24) ದುರ್ಘಟನೆಯಲ್ಲಿ ಸಾವನ್ನಪ್ಪಿದ ದುರ್ದೈವಿ. ಮುನಾಸಿನ್ ಸಂಗಡಿಗರಾದ ಮುಸ್ತಫ, ಸಿದ್ದೀಕರೊಂದಿಗೆ ಮೀನುಗಾರಿಕೆಗೆಂದು ತೆರಳಿದ್ದರು.

ಅಳಿವೆ ಬಾಗಿಲಿನ ನೀರಿನ ಸೆಳೆತದಿಂದ ದೋಣಿ ಮಗುಚಿರಬೇಕೆಂದು ಅಂದಾಜಿಸಲಾಗಿದ್ದು, ಮುಸ್ತಫ ಹಾಗೂ ಸಿದ್ದೀಕ್ ಈಜಿ ದಡ ಸೇರಿದ್ದರು. ಆದರೆ ಮುನಾಸಿನ್ ಕಾಣೆಯಾಗಿದ್ದು, ಬಳಿಕ ಕರಾವಳಿ ಪೆÇಲೀಸರ ಸಹಾಯದಿಂದ ನಡೆಸಿದ ಕಾರ್ಯಾಚರಣೆಯಲ್ಲಿ ಸಂಜೆ ಮೃತದೇಹ ಪತ್ತೆಹಚ್ಚಲಾಯಿತು.