ಕಾರು ಬೈಕ್ ಡಿಕ್ಕಿ ಯುವಕ ದಾರುಣ ಸಾವು ವೈದ್ಯರ ಸಹಿತ ಇಬ್ಬರು ಅಸ್ಪತ್ರೆಗೆ

ಅಪಘಾತದಲ್ಲಿ ಮೃತಪಟ್ಟ ಜಯಶಂಕರ್

ನಮ್ಮ ಪ್ರತಿನಿಧಿ ವರದಿ
ಕಾಸರಗೋಡು : ಕಾರು ಹಾಗು ಬೈಕ್ ಪರಸ್ಪರ ಡಿಕ್ಕಿ ಹೊಡೆದು ಉಂಟಾದ ಅಪಘಾತದಲ್ಲಿ ಯುವಕನೊಬ್ಬ ದಾರುಣವಾಗಿ ಸಾವನ್ನಪ್ಪಿ ವೈದ್ಯರ ಸಹಿತ ಇಬ್ಬರು ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾದ ಘಟನೆ ಸೀತಾಂಗೋಳಿ ಜಂಕ್ಷನಿನಲ್ಲಿ ಸಂಭವಿಸಿದೆ.
ಕನ್ಯಾಪಾಡಿಗೆ ಸಮೀಪದ ತಲಪ್ಪನಾಜ ನಿವಾಸಿ ವೃತ್ತಿಯಲ್ಲಿ ಇಲೆಕ್ಟ್ರಿಷಿಯನ್ ಆಗಿದ್ದ ಜಯಶಂಕರ್ (28) ಸಾವನ್ನಪ್ಪಿದ ದುರ್ದೈವಿ. ಕಾರು ಪ್ರಯಾಣಿಕರಾದ ಬದಿಯಡ್ಕ ನಿವಾಸಿ ಡಾ. ಪ್ರದೀಪ್ ಹಾಗು ಜಯಶಂಕರ್ ಅಪಘಾತದಿಂದ ಗಾಯಗೊಂಡಿದ್ದಾರೆ. ಸೀತಾಂಗೋಳಿ ಪೆಟ್ರೋಲ್ ಪಂಪ್ ಸಮೀಪದಲ್ಲಿ ಈ ದುರ್ಘಟನೆ ಸಂಭವಿಸಿದೆ. ಕುಂಬಳೆ ಭಾಗದಿಂದ ಕೆಲಸ ಮುಗಿಸಿ ಸ್ನೇಹಿತ ರವಿ ಎಂಬಾತನೊಂದಿಗೆ ಜಯಶಂಕರ್ ಸಂಚರಿಸುತ್ತಿದ್ದ ಬೈಕಿಗೆ ಬದಿಯಡ್ಕ ಕಡೆಯಿಂದ ಆಗಮಿಸುತ್ತಿದ್ದ ಕಾರು ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ. ಜಯಶಂಕರನಿಗೆ ಅಷ್ಟೊಂದು ಗಂಭೀರ ಗಾಯವಾದ ಹಾಗೆ ತೋರದಿದ್ದರೂ ಆಸ್ಪತ್ರೆಗೆ ತಲುಪಿಸಿ ವೈದ್ಯರು ಶಸ್ತ್ರಕ್ರಿಯೆಗೆ ಸಜ್ಜಾಗುತ್ತಿದ್ದಂತೆಯೇ ಮರಣ ಸಂಭವಿಸಿದೆ.