ಬೈಕ್ ಸ್ಕಿಡ್ಡಾಗಿ ಯುವಕ ಗಂಭೀರ

ಗಂಭೀರ ಗಾಯಗೊಂಡ ಭರತೇಶ

ನಮ್ಮ ಪ್ರತಿನಿಧಿ ವರದಿ

ಮುಲ್ಕಿ : ಕೋಲ್ನಾಡು ಕಡೆಗೆ ಮುಲ್ಕಿಯಿಂದ ಬೈಕಿನಲ್ಲಿ ತೆರಳುತ್ತಿದ್ದ ಯುವಕನೊಬ್ಬ ಕಾರ್ನಾಡು ಜಂಕ್ಷನ್ ಬಳಿ ಸ್ಕಿಡ್ಡಾಗಿ ಗಂಬೀರ ಗಾಯಗೊಂಡ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ. ಗಂಭೀರ ಗಾಯಗೊಂಡ ಯುವಕನನ್ನು ಕೆ ಎಸ್ ರಾವ್ ನಗರ ನಿವಾಸಿ ಭರತೇಶ (26) ಎಂದು ಗುರುತಿಸಲಾಗಿದೆ.

ಮುಲ್ಕಿ ಕಡೆಯಿಂದ ಮದುವೆ ಸಮಾರಂಭ ಮುಗಿಸಿ ಕೋಲ್ನಾಡಿಗೆ ಬೈಕಿನಲ್ಲಿ ಹೋಗುತ್ತಿರುವ ವೇಳೆ ಕಾರ್ನಾಡು ಜಂಕ್ಷನಿನಲ್ಲಿ ವಾಹನವೊಂದು ಅಡ್ಡ ಬಂದ ಕಾರಣ ಬ್ರೇಕ್ ಹಾಕಿದ ವೇಳೆ ಬೈಕ್ ಸ್ಕಿಡ್ಡಾಗಿ ಸಿಮೆಂಟಿನ ಕಟ್ಟೆಗೆ ಡಿಕ್ಕಿ ಹೊಡೆದು ರಸ್ತೆಗೆ ಬಿದ್ದಿದೆ. ರಸ್ತೆಗೆ ಬಿದ್ದ ಸವಾರ ಭರತೇಶನ ಮುಖಕ್ಕೆ ಗಂಭೀರ ಗಾಯಗಳಾಗಿದ್ದು, ಸಮೀಪದ ಆಸ್ಪತ್ರೆಗೆ ದಾಖಲಾಗಿದ್ದಾರೆ. ತಿಂಗಳ ಹಿಂದೆ ಈತನ ತಂದೆಯು ರಿಕ್ಷಾ ಚಾಲನೆ ಮಾಡುತ್ತಿದ್ದಾಗ ನಾಯಿಯೊಂದು ಅಡ್ಡ ಬಂದು ಗಂಭೀರ ಗಾಯಗೊಂಡಿದ್ದರು.