ಕುಸಿದು ಬಿದ್ದು ಮೃತ

ಮೃತ ಮಹೇಶ್

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗದಲ್ಲಿದ್ದ ವ್ಯಕ್ತಿಯೊಬ್ಬರು ಸ್ನಾನದ ಕೊಠಡಿಯಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ನೀಲೇಶ್ವರ ಕರಿಂದಳಂ ಕೀಝಿಮಲ ನಿವಾಸಿ ಮಹೇಶ್ (31) ಮೃತ ದುರ್ದೈವಿ. ಕೆಲಸದ ಸ್ಥಳದಲ್ಲೇ ಈ ದುರ್ಘಟನೆ ಸಂಭವಿಸಿದೆ. ದೀರ್ಘ ಸಮಯದಿಂದ ಹೊರ ಬರದ ಕಾರಣ ಸಹೋದ್ಯೋಗಿಗಳು ಬಾಗಿಲು ತೆರೆದು ನೋಡಿದಾಗ ಅಸ್ವಸ್ಥಗೊಂಡು ಬಿದ್ದ ರೀತಿಯಲ್ಲಿ ಕಂಡುಬಂದಿದೆ. ಬಳಿಕ ಆಸ್ಪತ್ರೆ ಸಾಗಿಸಿದರೂ ಜೀವ ರಕ್ಷಿಸಲು ಸಾಧ್ಯವಾಗಿಲ್ಲ.