ಮೊಬೈಲ್ ಟವರೇರಿ ಆತ್ಮಹತ್ಯೆ ಬೆದರಿಕೆ ಒಡ್ಡಿದ ಯುವಕ ಸೆರೆ

ಆತ್ಮಹತ್ಯೆ ಬೆದರಿಕೆಯೊಡ್ಡಿದ ಯುವಕನನ್ನು ಪೋಲಿಸರು ಠಾಣೆಗೆ ಕರೆದೊಯ್ಯುತ್ತಿರುವುದು

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಯುವಕನೊಬ್ಬ ಮೊಬೈಲ್ ಟವರೇರಿ ಆತ್ಮಹತ್ಯೆಗೈಯುವ ಬೆದರಿಕೆಯೊಡ್ಡಿದ್ದು, ಬಳಿಕ ಸ್ಥಳೀಯರು ನೀಡಿದ ಮಾಹಿತಿಯಂತೆ ಕಾಸರಗೋಡು ಅಗ್ನಿಶಾಮಕದಳ ನಡೆಸಿದ ಕಾರ್ಯಾಚರಣೆಯಲ್ಲಿ ಯುವಕನ್ನು ಸೆರೆಹಿಡಿದು ಪೋಲಿಸರಿಗೊಪ್ಪಿಸಲಾಗಿದೆ.

ಕಾಸರಗೋಡು ರೈಲ್ವೇ ನಿಲ್ದಾಣ ಸಮೀಪದ ಖಾಸಗಿ ಕಟ್ಟಡವೊಂದರ ಮೇಲೆ ನಿರ್ಮಿಸಲಾಗಿದ್ದ ಸುಮಾರು 100 ಅಡಿ ಎತ್ತರದ ಮೊಬೈಲ್ ಟವರಿಗೆ ಸುಮಾರು 21 ವರ್ಷದ ಯುವಕನೊಬ್ಬ ಶುಕ್ರವಾರ ಬೆಳಿಗ್ಗೆ ಏಳು ಗಂಟೆ ಏರಿ ಕೆಳಗೆ ಜಿಗಿದು ಆತ್ಮಹತ್ಯೆ ಗೈಯುವ ಬೆದರಿಕೆಯೊಡ್ಡಿದ್ದಾನೆ. ಇದನ್ನು ಕಂಡ ಸ್ಥಳೀಯರು ಕೂಡಲೇ ಪೋಲಿಸರಿಗೆ ಹಾಗೂ ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದರು. ಪೋಲಿಸರು ಹಾಗೂ ಊರವರು ಯುವಕನ ಮನವೊಲಿಸಿ ಕೆಳಗಿಸಲು ಪ್ರಯತ್ನಿಸಿದರೂ ಸಫಲವಾಗಲಿಲ್ಲ. ಬಳಿಕ ಅಗ್ನಿಶಾಮಕದಳ ಆಗಮಿಸಿ ಯುವಕನ್ನು ಹಿಡಿದು ಕೆಳಕ್ಕಿಳಿಸಿ ಪೋಲಿಸರಿಗೊಪ್ಪಿಸಿದ್ದಾರೆ. ಈತ ಮಾಯಿಪ್ಪಾಡಿ ನಿವಾಸಿ ಯುವಕನೆಂಬುದಾಗಿ ತಿಳಿದುಬಂದಿದೆ. ಪೋಲಿಸರು ಯುವಕನನ್ನು ವಶಕ್ಕೆ ಪಡೆದು ವಿಚಾರಿಸುತ್ತಿದ್ದಾರೆ.