ಕಲ್ಲೆಸೆತ : ಕೇಸು

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಈದ್ ಮಿಲಾದ್ ಮೆರವಣಿಗೆಯನ್ನು ವೀಕ್ಷಿಸುತ್ತಿದ್ದವರ ಮೇಲೆ ಕಲ್ಲೆಸೆದ ಪ್ರಕರಣದಲ್ಲಿ ಬದಿಯಡ್ಕ ಪೆÇಲೀಸರು ಕೇಸು ದಾಖಲಿಸಿದ್ದಾರೆ.

ಬದಿಯಡ್ಕ ನಿವಾಸಿ ನಾರಾಯಣ (38) ನೀಡಿದ ದೂರಿನಂತೆ ಕಂಡರೆ ಪತ್ತೆ ಹಚ್ಚಬಹುದಾದ ಯುವಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಬದಿಯಡ್ಕ ಪೇಟೆಯಲ್ಲಿ ಈದ್ ಮಿಲಾದ್ ರ್ಯಾಲಿ ನಡೆದ ವೇಳೆ ರ್ಯಾಲಿಯ ಹಿಂಭಾಗದಲ್ಲಿದ್ದ ಯುವಕ ಮೆರವಣಿಗೆ ವೀಕ್ಷಿಸುತ್ತಿದ್ದವರ ಮೇಲೆ ಕಲ್ಲೆಸೆದನೆಂದು ದೂರಲಾಗಿದೆ.