ವಿವಾಹ ಹೆಸರಲ್ಲಿ ವಂಚನೆ : ಯುವಕನ ವಿರುದ್ಧ ಕೇಸು

ಸಾಂದರ್ಭಿಕ ಚಿತ್ರ

ಕಾಸರಗೋಡು : ಯುವತಿಯನ್ನು ವಿವಾಹವಾಗುವ ಭರವಸೆ ನೀಡಿ ವಂಚಿಸಿದ ಆರೋಪದಡಿ ಒಬ್ಬ ಯುವಕನ ವಿರುದ್ಧ ಪೆÇಲೀಸರು ಕೇಸು ದಾಖಲಿಸಿದ್ದಾರೆ. ಕುಂಬ್ಡಾಜೆ ನಿವಾಸಿ ಮನೋಜ್ (25) ಎಂಬಾತನ ವಿರುದ್ಧ ಕೇಸು ದಾಖಲಿಸಿಕೊಂಡಿರುವುದಾಗಿ ಪೆÇಲೀಸರು ತಿಳಿಸಿದ್ದಾರೆ.

ಬೇಳ ಪೆರಿಯಡ್ಕ ನಿವಾಸಿಯಾದ 22ರ ಹರೆಯದ ಯುವತಿ ನೀಡಿದ ದೂರಿನಂತೆ ಕೇಸು ದಾಖಲಿಸಲಾಗಿದೆ. ಇಬ್ಬರು ಮಕ್ಕಳ ತಾಯಿಯಾದ ಯುವತಿಯನ್ನು ಮೊದಲ ಪತಿ ಈ ಹಿಂದೆ ಬಿಟ್ಟಿದ್ದನು. ಅನಂತರ ವಿವಾಹ ಭರವಸೆ ನೀಡಿ ಆಕೆಯನ್ನು ಭೇಟಿಯಾದ ಮನೋಜ್ ಮೂರು ವರ್ಷಕಾಲ ಆಕೆಯೊಂದಿಗೆ ವಾಸಿಸಿದ್ದನು. ಈ ಸಂಬಂಧದಲ್ಲಿ ಒಂದೂವರೆ ವರ್ಷ ಪ್ರಾಯದ ಒಂದು ಮಗು ಕೂಡಾ ಇದೆ. ಇದೀಗ ಮನೋಜ್ ತನ್ನನ್ನು ತಿರಸ್ಕರಿಸಿ ವಂಚಿಸಿದ್ದಾನೆಂದು ಯುವತಿ ಪೆÇಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ.