ಆಸ್ಪತ್ರೆಯಲ್ಲಿದ್ದ ಯುವತಿಯ ನೋಡಲು ಬಂದ ಯುವಕಗೆ ಮನೆಯವರಿಂದ ಹಲ್ಲೆ

ನಮ್ಮ ಪ್ರತಿನಿಧಿ ವರದಿ

ಉಡುಪಿ : ಯಾವುದೋ ಮಾತ್ರೆ ಸೇವಿಸಿ ಚಿಂತಾಜನಕ ಸ್ಥಿತಿಯಲ್ಲಿ ಉಡುಪಿ ನಗರದ ಮಿತ್ರ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಯುವತಿಯೊಬ್ಬಳನ್ನು ನೋಡಲು ಬಂದಿದ್ದ ಯುವಕಗೆ, ಯುವತಿ ಕಡೆಯವರು ಸೇರಿಕೊಂಡು ಆಸ್ಪತ್ರೆಯೊಳಗೆ ಅಕ್ರಮ ಬಂಧನದಲ್ಲಿಟ್ಟು ಹಲ್ಲೆ ನಡೆಸಿದ ಘಟನೆ ನಡೆದಿದೆ.

ಕುಂದಾಪುರ ತಾಲೂಕು ಬೈಂದೂರು ಗ್ರಾಮದ ಯಡ್ತರೆ ಸಣ್ಣಹಿತ್ಲು ನಿವಾಸಿ ಪ್ರವೀಣ ಹಲ್ಲೆಗೊಳಗಾದವರು. ಮನೋಹರ್ ಪೂಜಾರಿ ಹಾಗೂ ಚರಣ್ ಪೂಜಾರಿ ಹಲ್ಲೆ ನಡೆಸಿದ ಆರೋಪಿಗಳು. ಶ್ರೀದೇವಿ ಎಂಬಾಕೆ ಮಾತ್ರೆ ಸೇವಿಸಿ ಚಿಂತಾಜನಕ ಸ್ಥಿತಿಯಲ್ಲಿ ಮಿತ್ರ ಆಸ್ಪತ್ರೆಗೆ ದಾಖಲಾಗಿದ್ದಳು. ಈ ಬಗ್ಗೆ ಪ್ರವೀಣ್ ಪರಿಚಯದ ಆಸ್ಪತ್ರೆಯ ನರ್ಸ್ ಸರೋಜಮ್ಮ ಎಂಬಾಕೆ ಪ್ರವೀಣಗೆ ಫೋನ್ ಮಾಡಿ ವಿಷಯ ತಿಳಿಸಿದ್ದಳು. ಅದರಂತೆ ಪ್ರವೀಣ

ಶ್ರೀದೇವಿಯಲ್ಲಿ ಏನಾಯಿತು ಎಂದು ಕೇಳುತ್ತಿದ್ದಂತೆ, ಆಕೆಯ ಆರೈಕೆಯಲ್ಲಿದ್ದ ಆರೋಪಿಗಳಾದ ಭಾವ ಮನೋಹರ್ ಪೂಜಾರಿ ಮತ್ತು ತಮ್ಮ ಚರಣ್ ಪೂಜಾರಿ ಸೇರಿಕೊಂಡು ಆಸ್ಪತ್ರೆಯ ಒಳಗಿನಿಂದ ಬಾಗಿಲಿನ ಚಿಲಕ ಹಾಕಿ ಹೊರಗೆ ಹೋಗದಂತೆ ಬಂಧನದಲ್ಲಿಟ್ಟು ಇಬ್ಬರು ಕೈಗಳಿಂದ ಹೊಡೆದು ಕಾಲಿನಿಂದ ತುಳಿದಿದ್ದಾರೆ. ಆ ಪೈಕಿ ಆರೋಪಿ ಮನೋಹರ್ ಹ್ಯಾಂಡ್ ಗ್ಲೌಸ್ ಹಾಕಿಕೊಂಡು ಕುತ್ತಿಗೆಯನ್ನು ಒತ್ತಿ ಹಿಡಿದು ಇಲ್ಲಿಯೇ ನಿನ್ನನ್ನು ಕೊಂದು ಹಾಕುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆಂದು ಆರೋಪಿಸಲಾಗಿದೆ.

ಹಲ್ಲೆಗೊಳಗಾದ ಪ್ರವೀಣ ಉಡುಪಿ ಜಿಲ್ಲಾ ಅಜ್ಜರಕಾಡು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆರೋಪಿಗಳ ವಿರುದ್ಧ ಉಡುಪಿ ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ.