ತಲಪಾಡಿ ಟೋಲ್ ಬೂತಲ್ಲಿ ಯುವಕಗೆ ಹಲ್ಲೆ

ಮಂಗಳೂರು : ತಲಪಾಡಿ ಟೋಲ್ ಗೇಟ್ ಸಿಬ್ಬಂದಿಗಳು ವೃದ್ಧರೊಬ್ಬರ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ಕಂಡು ಪ್ರಶ್ನಿಸಲು ತೆರಳಿದ ಯುವಕನಿಗೆ ಅದೇ ಸಿಬ್ಬಂದಿಗಳು ಸೇರಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಗುರುವಾರ ನಡೆದಿದೆ.

ಕಂದಕ ನಿವಾಸಿ ಹಾಜಿ ರೆಸಿಡೆನ್ಸಿಯ ಅಬ್ದುಲ್ ಹಮೀದ್ ಸರಾಫತ್ (25) ಹಲ್ಲೆಗೊಳಗಾದವರು. ಮಂಗಳೂರಿನಿಂದ ಕಾಸರಗೋಡಿಗೆ ಕಾರಿನಲ್ಲಿ ತೆರಳುವ ಸಂದರ್ಭ ಈ ಘಟನೆ ನಡೆದಿದೆ.

ಬಳಿಕ ಅಲ್ಲಿಗೆ ಆಗಮಿಸಿದ ಪರಿಚಯದ ವ್ಯಕ್ತಿಯೊಬ್ಬರು ಸರಾಫತ್‍ನನ್ನು ಉಳ್ಳಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಟೋಲ್ ಸಿಬ್ಬಂದಿಗಳಿಗೆ ನೀಡಲಾಗುವ ಗುರುತಿನ ಚೀಟಿ ಎಲ್ಲರ ಬಳಿಯಲ್ಲೂ ಇದ್ದು, ಟೋಲ್‍ಗೇಟ್ ಸಿಬ್ಬಂದಿಗಳೇ ಹಲ್ಲೆ ನಡೆಸಿರುವುದು ನಿಜ ಎಂದು ಸರಫತ್ ದೂರಿದ್ದಾರೆ.

ಹಲ್ಲೆಗೊಳಗದ ಸರಾಫತ್ ಇದೀಗ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.  ಪೊಲೀಸರು  ಟೋಲ್‍ಗೇಟಿನಲ್ಲಿರುವ ಸಿಸಿಟಿವಿ ದಾಖಲೆಯನ್ನು ಸಂಗ್ರಹಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ.