ಗಂಗೊಳ್ಳಿ ಸರಣಿ ಬೈಕುಗಳಿಗೆ ಬೆಂಕಿ : ಆರೋಪಿ ಬಂಧನ

ನಮ್ಮ ಪ್ರತಿನಿಧಿ ವರದಿ

ಕುಂದಾಪುರ : ಕಳೆದ ನಾಲ್ಕು ದಿನಗಳಿಂದ ದಿನಕ್ಕೊಂದರಂತೆ ಬೈಕುಗಳಿಗೆ ಬೆಂಕಿ ಇಕ್ಕಿದ್ದ ಆರೋಪಿಯನ್ನು ಗಂಗೊಳ್ಳಿ ಪೊಲೀಸರು ಬಂಧಿಸಿದ್ದಾರೆ. ಗಂಗೊಳ್ಳಿಯ ದಾಕುಹಿತ್ಲು ಮಸೀದಿಯ ಅಝಾನ್ ಕೂಗುವ ನಯೀಮ್ ಎಂಬವರ ಸ್ಕೂಟರಿಗೆ ಬೆಳಗಿನ ಜಾವ ಬೆಂಕಿ ಇಕ್ಕಿ ಪರಾರಿಯಾದ ಸಂದರ್ಭ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಗಂಗೊಳ್ಳಿಯ ದಾಕುಹಿತ್ಲು ನಿವಾಸಿ ಕೃಷ್ಣ ಖಾರ್ವಿ ಎಂಬವರ ಪುತ್ರ ಗುರುರಾಜ್ ಖಾರ್ವಿ (28) ಎಂಬಾತ ಬಂಧಿತ ಆರೋಪಿ.

ದಾಕುಹಿತ್ಲು ಟಕಿಯಾ ಮೊಹಲ್ಲಾ ನಿವಾಸಿ ಮಸೀದಿಯಲ್ಲಿ ಅಝಾನ್ ಕೂಗುವ ನಯೀಮ್ ಎಂಬವರ ಸ್ಕೂಟರಿಗೆ ಬೆಳಗಿನ ಜಾವ ಸಮಾರಿಗೆ ಬೆಂಕಿ ಇಕ್ಕಲಾಗಿತ್ತು. ಕೂಡಲೇ ಎಚ್ಚೆತ್ತುಕೊಂಡ ಮನೆಯವರು ಪೆÇಲೀಸರಿಗೆ ಮಾಹಿತಿ ನೀಡಿದ್ದು, ಅಲ್ಲೇ ಸಮೀಪದಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಠಾಣಾಧಿಕಾರಿ ಸುಬ್ಬಣ್ಣ ಹಾಗೂ ಸಿಬ್ಬಂದಿ ಸ್ಥಳಕ್ಕಾಗಮಿಸಿದ್ದು, ಓಡುತ್ತಿದ್ದ ಆರೋಪಿಯನ್ನು ಹಿಂಬಾಲಿಸಿದ್ದಾರೆ. ಈ ಸಂದರ್ಭದಲ್ಲಿ ಗುರುರಾಜ್ ಮನೆಯೊಳಗೆ ಹೋಗಿದ್ದನ್ನು ಗಮನಿಸಿದ ಪೆÇಲೀಸರು ಆತನನ್ನು ಮನೆಯಿಂದಲೇ ತಮ್ಮ ವಶಕ್ಕೆ ಪಡೆದಿದ್ದಾರೆ.

LEAVE A REPLY