ಎರಡೂವರೆ ವರ್ಷದ ಬಾಲಕಿ ಅತ್ಯಾಚಾರ, ಯುವಕ ಬಂಧನ

ಸಾಂದರ್ಭಿಕ ಚಿತ್ರ

ಬೆಳಗಾವಿ : ಎರಡೂವರೆ ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ 21 ವರ್ಷದ ಯುವಕನೊಬ್ಬ, ಬಳಿಕ ಆಕೆಯನ್ನು ಹೊಂಡದಲ್ಲಿ ಹೂಳಲು ಯತ್ನಿಸಿದ ಘಟನೆ ಇಲ್ಲಿನ ಬೈಲಹೊಂಗಲದ ವಣ್ಣೂರಿನಲ್ಲಿ ಶನಿವಾರ ನಡೆದಿದೆ. ಅಂಗನವಾಡಿಯ ಹೊರಗಡೆ ಆಟವಾಡುತ್ತಿದ್ದ ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಕರೆತಂದು ಅತ್ಯಾಚಾರ ನಡೆಸಿದ್ದಾನೆ. ಬಳಿಕ ಮದ್ಯ ಸೇವಿಸಿದ್ದ ಆರೋಪಿ ಸುಭಾಷ್ ನಾಯಕ್ ಬಾಲಕಿಯನ್ನು ಜೀವಂತ ಹೂಳಲು ಹೊಂಡ ತೆಗೆಯುತ್ತಿದ್ದುದನ್ನು ದಾರಿಹೋಕರು ನೋಡಿದರು. ಆಗ ಯುವಕ ಓಡಿದರೂ ಸಾರ್ವಜನಿಕರು ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಬೆಳಗಾವಿ ಸರ್ಕಾರಿ ಆಸ್ಪತ್ರೆ ಸೇರಿರುವ ಬಾಲಕಿಯ ಸ್ಥಿತಿ ಚಿಂತಾಜನಕವಾಗಿದೆ.