ಗಾಂಜಾದೊಂದಿಗೆ ಯುವಕನ ಬಂಧನ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : 200 ಗ್ರಾಂ ಗಾಂಜಾದೊಂದಿಗೆ ಸ್ಕೂಟರಿನಲ್ಲಿ ಸಂಚರಿಸುತ್ತಿದ್ದ ಯುವಕನೊಬ್ಬನನ್ನು ಅಬಕಾರಿ ಪೆÇಲೀಸರು ಬಂಧಿಸಿದ ಘಟನೆ ಉದ್ಯಾವರ ಮಾಡ ಪರಿಸರದಲ್ಲಿ ಸಂಭವಿಸಿದೆ.

ಉದ್ಯಾವರ ಮಾಡ ಸಮೀಪದ ಕಲ್ಪನ ಕುನ್ನು ನಿವಾಸಿ ಬಷೀರ್ (40) ಬಂಧಿತ ಯುವಕ. ಕಾಸರಗೋಡು ಅಬಕಾರಿ ಪೆÇಲೀಸರು ಉದ್ಯಾವರ ಮಾಡ ಪರಿಸರದಲ್ಲಿ ವಾಹನ ತಪಾಸಣೆಯಲ್ಲಿರುವಾಗ ಆ ದಾರಿಯಾಗಿ ಸ್ಕೂಟರಿನಲ್ಲಿ ಬಂದ ಬಷೀರನನ್ನು ತಪಾಸಣೆ ಮಾಡಿದಾಗ ಸ್ಕೂಟರಿನಲ್ಲಿ ಗಾಂಜಾ ಪತ್ತೆಯಾಗಿರುವುದಾಗಿ ಹೇಳಲಾಗಿದೆ. ಸ್ಕೂಟರನ್ನು ವಶಕ್ಕೆ ಪಡೆಯಲಾಗಿದೆ.