ಮಹಿಳೆಯರ ವಾಟ್ಸಪ್ ಗ್ರೂಪ್ಪಲ್ಲಿ ಸೇರಿ ಅಸಭ್ಯವಾಗಿ ವರ್ತಿಸಿದ ಯುವಕನ ವಿರುದ್ಧ ಕೇಸು

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಮಹಿಳೆಯರ ವಾಟ್ಸಪ್ ಗ್ರೂಪ್ಪಿನಲ್ಲಿ ಮಹಿಳೆಯ ಹೆಸರಿನಲ್ಲಿ ಸೇರಿಕೊಂಡು ಅಸಭ್ಯವಾಗಿ ವರ್ತಿಸಿದ ಯುವಕನನ್ನು ಪೆÇಲೀಸರು ವಶಕ್ಕೆ ಪಡೆದು ಕೇಸು ದಾಖಲಿಸಿದ್ದಾರೆ.

ಬಳಿಂಜೆ ನಿವಾಸ ಝುಬೈರ್ (26) ಸೆರೆಯಾದ ವ್ಯಕ್ತಿ. ಈತ ಇಶಾಲ್ ನಿಲಾವ್ ಎಂಬ ಹೆಸರಿನಲ್ಲಿ ಮಹಿಳೆಯರೇ ಅಡ್ಮಿನುಗಳಾಗಿರುವ ಹಾಗೂ ಮಹಿಳೆಯರೇ ಸದಸ್ಯರಾಗಿರುವ ಗ್ರೂಪ್ಪಿಗೆ ಆಯಿಷಾ ಎಂಬ ಹಸರಿನಲ್ಲಿ ಸೇರಿ ಕೊಂಡು ಅಸಭ್ಯವಾಗಿ ವರ್ತಿಸುತ್ತಿದ್ದ ಎನ್ನಲಾಗಿದೆ. ಬಳಿಕ ಮಹಿಳೆಯರ ವಿವಿಧ ಭಂಗಿಯ ಫೋಟೋಗಳನ್ನು ಕಳುಹಿಸಲು ವಿನಂತಿಸುತ್ತಿದ್ದನೆನ್ನಲಾಗಿದೆ. ಈತನ ಬಗ್ಗೆ ಅರಿಯದ ಮಹಿಳೆಯರು ಆರಂಭದಲ್ಲಿ ಫೋಟೋ ರವಾನಿಸಿದ್ದಾರೆ. ಬಳಿಕ ಅನುಮಾನಗೊಂಡ ಕೆಲ ಮಹಿಳೆಯರು ಸೈಬರಿನಿಂದ ಈತನ ನಿಜ ಫೋಟೋ ಪಡೆದಾಗಲೇ ವಿಷಯ ಗಮನಕ್ಕೆ ಬಂದಿದೆ. ಇದರಂತೆ ಪೆÇಲೀಸರು ಕೇಸು ದಾಖಲಿಸಿದ್ದಾರೆ.