ಅಪ್ರಾಪ್ತೆ ಅಪಹರಿಸಿದ ಕೇರಳದ ಯುವಕ ಕಾಸರಗೋಡಲ್ಲಿ ಸೆರೆ

ಸಾಂದರ್ಭಿಕ ಚಿತ್ರ

ಕರಾವಳಿ ಅಲೆ  ವರದಿ

ಶಿರಸಿ : ಅಪಾಪ್ತೆಯನ್ನು ಕೇರಳಕ್ಕೆ ಅಪಹರಿಸಿಕೊಂಡು ಹೋದ ಯುವಕನನ್ನು ಕಾಸರಗೋಡ ಬಳಿ ಶಿರಸಿ ಪೊಲೀಸರು ಬಂಧಿಸಿ, ಪೋಸ್ಕೋ ಕೇಸಿನಡಿ ಪ್ರಕರಣ ದಾಖಲಿಸಿದ್ದಾರೆ.

ಯಲ್ಲಾಪುರ ಭಾಗದಲ್ಲಿ ಕೆಲಸ ಮಾಡುತ್ತಿದ್ದ ಕೇರಳ ಮೂಲದ ತಂದೆ-ತಾಯಿಯನ್ನು ಭೇಟಿಯಾಗಿ ಫೆಬ್ರವರಿ 5ರಂದು ಶಿರಸಿ ಬಸ್ ನಿಲ್ದಾಣಕ್ಕೆ ಬಂದ ಅಪ್ರಾಪ್ತ ವಯಸ್ಸಿನ ಹುಡುಗಿಯನ್ನು ಕಾಸರಗೋಡಿನ ಮಹಮದ್ ಶಫೀಕ್ ಕರೆದುಕೊಂಡು ಹೋದ ಬಗ್ಗೆ ಶಿರಸಿ ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಹುಡುಗಿಯು ಕೇರಳzಲ್ಲೇ ಓದುತ್ತಿದ್ದು, ಆಗಾಗ ಯಲ್ಲಾಪುರದಲ್ಲಿರುವ ತಂದೆ-ತಾಯಿ ನೋಡಲು ಬರುತ್ತಿದ್ದಳೆನ್ನಲಾಗಿದೆ.

ಇದೀಗ ಶಿರಸಿ ಸಿಪಿಐ ಗಿರೀಶ ನೇತೃತ್ವದಲ್ಲಿ ಪೊಲೀಸ್ ತಂಡವು ಸೋಮವಾರ ಕಾಸರಗೋಡಿಗೆ ಹೋಗಿ ಯುವಕನನ್ನು ಬಂಧಿಸಿ, ಪೋಸ್ಕೋ ಪ್ರಕರಣ ದಾಖಲಿಸಿದ್ದಾರೆ. ಯುವತಿಯನ್ನು ರಕ್ಷಿಸಿದ್ದಾರೆ. ಯುವಕನನ್ನು ಕೋರ್ಟಿಗೆ ಹಾಜರುಪಡಿಸಿದ್ದು, ಫೆಬ್ರವರಿ 28ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

 

 

 

 

LEAVE A REPLY