ನಕಲಿ ಮರಳು ಪಾಸ್ ನೀಡುವ ಯುವಕ ಸೆರೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ನಕಲಿ ಮರಳು ಪಾಸ್ ಮಾಡಲು ಕಟ್ಟಡಗಳ ಪ್ಲಾನ್ ಮತ್ತು ಎಸ್ಟಿಮೇಟ್ ತಯಾರಿಸಿ ನೀಡುವ ಯುವಕನನ್ನು ಬೇಡಗ ಪೆÇಲೀಸರು ಬಂಧಿಸಿದ್ದಾರೆ.

ಕುಂಡಂಗುಳಿಯ ಹಕೀಂ (30) ಬಂಧಿತ ಆರೋಪಿ. ನಕಲಿ ಮರಳು ಪಾಸ್ ಪ್ರಕರಣಕ್ಕೆ ಸಂಬಂಧಿಸಿ ಈ ಹಿಂದೆ ಬಂಧಿತನಾಗಿರುವ ಕುತ್ತಿಕೋಲ್ ಕಾನ ನಿವಾಸಿ ಕೆ ಶರತಚಂದ್ರನ(22)ಗೆ ಕಟ್ಟಡ ಪ್ಲಾನ್ ತಯಾರಿಸಿ ನೀಡಿದ್ದು ಹಕೀಂ ಎಂಬುದು ತನಿಖೆಯಿಂದ ಸ್ಪಷ್ಟಗೊಂಡಿರುವುದರಿಂದ ಆತನನ್ನು ಬಂಧಿಸಲಾಗಿದೆ.