ಬಾಲಕಿ ಗರ್ಭಿಣಿ ಮಾಡಿದ ಯುವಕ ಪೊಲೀಸ್ ವಶ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಪ್ರೀತಿಸುವ ನಾಟಕವಾಡಿ ಹದಿನಾರರ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ ಗರ್ಭವತಿಯನ್ನಾಗಿಸಿದ ಯುವಕನನ್ನು ಪೆÇಲೀಸರು ಬಂಧಿಸಿದ್ದಾರೆ.

ಕರ್ನಾಟಕ ದಾವಣಗೆರೆ ನಿವಾಸಿ ಹಾಗೂ ಪ್ರಸ್ತುತ ಕಯ್ಯಾರಿನ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿರುವ ಮಾದೇಶ (23) ಎಂಬಾತನನ್ನು ಬಂಧಿಸಲಾಗಿದೆ. ಜೆಸಿಬಿ ಆಪರೇಟರ್ ಆಗಿ ಕೆಲಸ ನಿರ್ವಹಿಸುತ್ತಿರುವ ಮಧ್ಯೆ ಯುವತಿಯ ಪರಿಚಯಗೊಂಡಿರುವುದಾಗಿ ಹೇಳಲಾಗಿದೆ. ಪ್ರೇಮ ಗಡಿದಾಟಿದಾಗ ಬಾಲಕಿಗೆ ವಿವಾಹ ಭರವಸೆ ನೀಡಿದ ಆರೋಪಿ ಕುಂಬಳೆಯಲ್ಲಿರುವ ಸ್ನೇಹಿತನ ವ್ಯಾಪಾರ ಸಂಸ್ಥೆಗೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿರುವುದಾಗಿ ದೂರಲಾಗಿದೆ. ಈ ಹಿನ್ನೆಲೆಯಲ್ಲಿ ಗರ್ಭವತಿಯಾದ ವಿಷಯ ತಾಯಿಗೆ ತಿಳಿದಾಗ ಪೆÇಲೀಸರಿಗೆ ದೂರು ನೀಡಲಾಗಿತ್ತು.