ಬಾಲಕಿಗೆ ಗರ್ಭದಾನ ಮಾಡಿದ ಸಂಬಂಧಿ ಯುವಕ ಬಂಧನ

ನಮ್ಮ ಪ್ರತಿನಿಧಿ ವರದಿ

ಪುತ್ತೂರು : ಶಾಲಾ ಬಾಲಕಿಯೊಬ್ಬಳ ಜೊತೆ ಯುವಕನೊಬ್ಬ ದೆÉೈಹಿಕ ಸಂಪರ್ಕ ಬೆಳಸಿ ಆಕೆ ಗರ್ಭಿಣಿಯಾಗಿದ್ದು, ಪ್ರಕರಣದ ಆರೋಪಿ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ಪೋಕ್ಸೋ ಕೇಸು ದಾಖಲಾಗಿದೆ. ಮುಂಡೂರು ಗ್ರಾಮದ ಸಂಜೀವ ಎಂಬವರ ಪುತ್ರ ಜಯಾನಂದ ಬಂಧಿತ ಆರೋಪಿ. ಈತ ಬಾಲಕಿಯ ಸಂಬಂಧಿಯಾಗಿದ್ದು, ಆಕೆ ಶಾಲೆಗೆ ತೆರಳುವಾಗಲು ಆಕೆಗೆ ಕೀಟಲೆ ನೀಡುತ್ತಿದ್ದ.

ಸಂಬಂಧಿಯಾದ ಕಾರಣ ಮನೆಯವರೂ ಈ ವಿಚಾರದಲ್ಲಿ ಅಪಸ್ವರ ಎತ್ತಿರಲಿಲ್ಲ. ಬಾಲಕಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಗೆ ಬರುತ್ತಿದ್ದ ಆರೋಪಿ ಜಯಾನಂದ ಆಕೆಯನ್ನು ಪುಸಲಾಯಿಸಿ ಆಕೆಯೊಂದಿಗೆ ದೈಹಿಕ ಸಂಪರ್ಕವನ್ನು ಬೆಳೆಸಿದ್ದ. ಪರಿಣಾಮ ಆಕೆ ಎರಡು ತಿಂಗಳ ಗರ್ಭಿಣಿಯಾಗಿದ್ದು, ಬಳಿಕ ಮನೆಯವರಿಗೆ ವಿಚಾರ ಗೊತ್ತಾಗಿದೆ. ಬಾಲಕಿಯಲ್ಲಿ ವಿಚಾರಿಸಿದಾಗ ಆರೋಪಿಯ ಕುರಿತು ಮಾಹಿತಿ ನೀಡಿದ್ದಾಳೆ. ಪುತ್ತೂರು ಗ್ರಾಮಾಂತರ ಪೊಲೀಸರು ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.