ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಯುವಕ ಸೆರೆ

ಆರೋಪಿ ದೀಪಕ್

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಕಾಲೇಜಿನಿಂದ ಹಿಂತಿರುಗುತ್ತಿರುವಾಗ ಬಸ್ಸಿನಲ್ಲೂ ಬಳಿಕ ಮನೆಗೆ ತೆರಳುವ ಕಾಲು ದಾರಿಗಳಲ್ಲೂ ಹಿಂಬಾಲಿಸಿಕೊಂಡು ವಿದ್ಯಾರ್ಥಿನಿಗೆ ಕಿರುಕುಳ ನೀಡುತ್ತಿದ್ದ ಯುವಕನೊಬ್ಬನನ್ನು ಪೊಲೀಸರು ಸೆರೆ ಹಿಡಿದಿದ್ದಾರೆ.
ಬದಿಯಡ್ಕ ಬೆಲ್ಪತ್ತಡ್ಕ ನಿವಾಸಿ ದೀಪಕ್ (19) ಸೆರೆಗೀಡಾದ ಯುವಕ. ಬೆಂಗಳೂರಿನಿಂದ ಬುಲೆಟ್ ಕಳವುಗೈದ ಪ್ರಕರಣ ಸೇರಿದಂತೆ ಇತರ ಹಲವು ಕಳವು ಪ್ರಕರಣಗಳಲ್ಲೂ ಈತ ಆರೋಪಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇತ್ತೀಚೆಗೆ ಜಾಮೀನಿನಲ್ಲಿ ಹೊರಬಂದ ಈತ ಮತ್ತೆ 17 ವರ್ಷದ ಯುವತಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಮತ್ತೆ ಸೆರೆಯಾಗಿದ್ದಾನೆ.