ಬಾಲಕಿ ಜೊತೆ ಪರಾರಿ :ಯುವಕನ ಸೆರೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮುಲ್ಕಿ : ಇಲ್ಲಿನ ಠಾಣಾ ವ್ಯಾಪ್ತಿಯ ಕೆ ಎಸ್ ರಾವ್ ನಗರದ ಬಾಲಕಿಯನ್ನು ಪ್ರೀತಿಸಿ ಆಕೆ ಜೊತೆ ಪರಾರಿಯಾಗಿದ್ದ ತುಮಕೂರು ಮೂಲದ ಯುವಕನನ್ನು ಮುಲ್ಕಿ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

ತುಮಕೂರು ಗೋಕುಲ ಬಡಾವಣೆ ಮೂಲದ ಕೀರ್ತಿರಾಜ್ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ತನ್ನ ಅಜ್ಜಿ ಮನೆಯಾದ ಮುಲ್ಕಿಯ ಕೆ ಎಸ್ ರಾವ್ ನಗರದ ಲಿಂಗಪ್ಪಯ್ಯಕಾಡಿಗೆ ಬಂದಿದ್ದು, ನೆರೆಮನೆಯ ಬಾಲಕಿಯನ್ನು ಪ್ರೀತಿಸಿದ್ದ. ಬಳಿಕ ಆಕೆಯನ್ನು ತುಮಕೂರು, ಮೈಸೂರು ಕಡೆಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಹಾಗೂ ಮೈಸೂರಿನಲ್ಲಿ ಪಿಜಿಗೆ ಸೇರಿಸಿದ್ದಾನೆ ಎಂದು ಮುಲ್ಕಿ ಪೊಲೀಸರು ತಿಳಿಸಿದ್ದಾರೆ. ಬಾಲಕಿ ಮುಲ್ಕಿ ಕಾಲೇಜೊಂದರ ವಿದ್ಯಾರ್ಥಿನಿಯಾಗಿದ್ದು, ಆಕೆ ಕಾಣೆಯಾಗಿರುವ ಬಗ್ಗೆ ಮುಲ್ಕಿ ಠಾಣೆಯಲ್ಲಿ ದೂರು ದಾಖಲಾಗಿತ್ತು. ಬಾಲಕಿ ನಾಪತ್ತೆಯನ್ನು ಸವಾಲಾಗಿ ಸ್ವೀಕರಿಸಿದ ಮುಲ್ಕಿ ಪೊಲೀಸರು ಬಾಲಕಿಯನ್ನು ಮೈಸೂರು ಪಿಜಿಯಲ್ಲಿ ಪತ್ತೆ ಹಚ್ಚಿ ಆರೋಪಿ ಕೀರ್ತಿರಾಜನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

 

 

LEAVE A REPLY