ಮೊಬೈಲ್ ಕಂಪೆನಿಗೆ ಮೋಸ : ಪದವೀಧರ ಪೊಲೀಸ್ ಬಲೆಗೆ

ನವದೆಹಲಿ : ಇ-ಕಾಮರ್ಸ್ ಕಂಪೆನಿಯೊಂದಕ್ಕೆ ಬೆಳೆಬಾಳುವ ಮೊಬೈಲ್ ಫೋನುಗಳಿಗಾಗಿ ಆರ್ಡರ್ ಮಾಡಿ, ಫೋನುಗಳನ್ನು ಸ್ವೀಕರಿಸಿದ ಬಳಿಕ ತಾನು ಖಾಲಿ ಪೆಟ್ಟಿಗೆ ಪಡೆದಿದ್ದೇನೆಂದು ಹೇಳಿ 52 ಲಕ್ಷ ರೂ ಪಂಗನಾಮ ಹಾಕಿದ ಹೋಟೆಲ್ ಮ್ಯಾನೇಜ್ಮೆಂಟ್ ಪದವೀಧರ ಶಿವಂ ಛೋಪ್ರಾ (21) ಎಂಬವನನ್ನು ಪೊಲೀಸರು ಮೊನ್ನೆ ಬಂಧಿಸಿದರು. ಎಪ್ರಿಲಿನಿಂದ ಮೇವರೆಗೆ ಈತ ಕಂಪೆನಿಯಿಂದ 225 ಮೊಬೈಲ್ ಫೋನುಗಳ ಹಣ ಮರುಪಾವತಿಸುವಂತೆ ಕಂಪೆನಿಗೆ ಕೇಳಿಕೊಂಡಿದ್ದ. ಕಂಪೆನಿಯು ಈತನಿಗೆ 166 ಸಂದರ್ಭಗಳಲ್ಲಿ ಹಣ ಮರುಪಾವತಿಸಿತ್ತು ಎಂದು ವಾಯುವ್ಯ ಡಿಸಿಪಿ ಮಿಲಿಂದ್ ದುಂಬೆರೆ ಹೇಳಿದರು.