ನಗ್ನ ಚಿತ್ರ ಬಳಸಿ ಬ್ಲಾಕ್ಮೇಲ್ ಆರೋಪಿ ಯುವಕನ ಬಂಧನ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಯುವತಿಯ ನಗ್ನ ಚಿತ್ರಗಳನ್ನು ಸಂಬಂಧಿಕರಿಗೆ ಕಳುಹಿಸಿಕೊಡುತ್ತೇನೆಂದು ಬೆದರಿಸಿ ಬ್ಲಾಕ್ಮೇಲ್ ಮಾಡುತ್ತಿದ್ದ ಯುವಕನನ್ನು ಪೆÇಲೀಸರು ಬಂಧಿಸಿದ್ದಾರೆ.

ಕಾಸರಗೋಡು ಪಾಲವಯಲ್ ನಿವಾಸಿ ನಾಗಮಟತ್ತಿಲ್ ಎನ್ ಎಸ್ ಎನ್ ಎಸ್ ಶರತ್ ಕುಮಾರ್ (25) ಬಂಧಿತ ಆರೋಪಿ. ಚುಝಿಲ್ ಕನ್ನಾಡಿಪ್ಪಾರ ನಿವಾಸಿಯಾದ 26 ವರ್ಷದ ಹರೆಯದ ಯುವತಿಯನ್ನು ಬ್ಲಾಕ್ಮೇಲ್ ಮಾಡಲು ಪ್ರಯತ್ನಿಸಿದ್ದ. ಮೊದಲು ಪರಸ್ಪರ ಪರಿಂಚಯವಿದ್ದ ಕುವೈತಿನಲ್ಲಿ ನೌಕರಿಯಲ್ಲಿದ್ದ ಯುವತಿ ಹಾಗೂ ಆರೋಪಿ ಬಳಿಕ ದೂರವಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಯುವತಿಯ ನಗ್ನ ಚಿತ್ರಗಳನ್ನು ಸಂಬಂಧಿಕರಿಗೆ ಕಳುಹಿಸಿಕೊಡುವುದಾಗಿ ಯುವಕ ಬ್ಲಾಕ್ಮೇಲ್ ಮಾಡಲು ಪ್ರಯತ್ನಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.ಈ ಬಗ್ಗೆ ಯುವತಿ ಪೆÇಲೀಸರಿಗೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಊರಿನಿಂದ ಪರಾರಿಯಾಗಿದ್ದ ಯುವಕನನ್ನು ಪೆÇಲೀಸರು ದೆಹಲಿಯಲ್ಲಿ ಬಂಧಿಸಿದ್ದಾರೆ.