ಮಾಲಕನ ಪರಿಚಯಸ್ಥನೆಂದು ಹೇಳಿ ಅಂಗಡಿಯಲ್ಲಿರುವ ಯುವತಿಯರಿಗೆ ವಂಚನೆ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಅಂಗಡಿ ಮಾಲಕನ ಪರಿಚಯಸ್ಥನಂತೆ ನಟಿಸಿ ಮಾಲಕನಿಲ್ಲದ ಸಮಯ ನೋಡಿ ಐಶಾರಾಮಿ ರೀತಿಯ ಡ್ರೆಸ್ ಹಾಕಿ ಹೆಂಗಸರಿರುವ ಅಂಗಡಿಗಳಿಗೆ ಆಗಮಿಸುತ್ತಿರುವ ವಂಚಕರು ಹಣ ಪಡೆದು ನಾಪತ್ತೆಯಾಗುತ್ತಿದ್ದಾರೆಂಬ ದೂರುಗಳು ಪೆÇಲೀಸರಿಗೆ ಲಭಿಸಿದೆ.

ಮಾಂಗಾಡಿನಲ್ಲಿರುವ ಅಂಗಡಿ ಯ ಮಾಲಕ ರಘು ಎಂಬವರ ಅಂಗಡಿಯಿಂದ ಅಪರಿಚಿತ ವ್ಯಕ್ತಿ 3500 ರೂ ಪಡೆದು ಪರಾರಿಯಾದ ಬಗ್ಗೆ ದೂರು ದಾಖಲಾಗಿದೆ.

ಮಧ್ಯಾಹ್ನ ವೇಳೆ ವಿಐಪಿ ರೀತಿಯ ಡ್ರೆಸ್ ಹಾಕಿ ಬೈಕಿನಲ್ಲಿ ಆಗಮಿಸಿದ ವ್ಯಕ್ತಿಯೊಬ್ಬ ಅಂಗಡಿಯಲ್ಲಿರುವ ಯುವತಿಯೊಂದಿಗೆ ಮಾಲಕನ ಗೆಳೆಯನೆಂದು ಹೇಳಿ 3500 ರೂ ನೀಡುವಂತೆ ಕೇಳಿದಾಗ ಶಂಕೆಗೊಂಡ ಯುವತಿ ಮಾಲಕಗೆ ಪೆÇೀನ್ ಮಾಡಿ ಮಾತನಾಡುತ್ತಿರುವ ಮಧ್ಯೆ ಫೆÇೀನನ್ನು ಆಕೆಯ ಕೈಯಿಂದ ತೆಗೆದು ಸಂಪರ್ಕ ಕಡಿತಗೊಳಿಸಿ ರಘು ಇದು ನಾನು ನಿನ್ನ ಸ್ನೇಹಿತ ಈಕೆಯಿಂದ ಹಣ ಪಡೆಯುತ್ತೇನೆಂದು ಹೇಳಿ ಕಟ್ ಮಾಡಿದ ರೀತಿಯಲ್ಲಿ ವರ್ತಿಸಿದಾಗ ಯುವತಿ ಹೌದಾಗಿರಬಹುದೆಂಬುದಾಗಿ ನಂಬಿ ಹಣ ನೀಡಿರುವುದಾಗಿ ಹೇಳಿಕೆ ನೀಡಿದ್ದಾಳೆ.

ಬಳಿಕ ಮಾಲಕ ಬಂದ ನಂತರವೇ ವಂಚನೆ ನಡೆದಿರುವುದು ಗಮನಕ್ಕೆ ಬಂದಿದೆ. ವಂಚಕನ ದೃಶ್ಯ ಸಮೀಪದ ಸೀಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಬೇಕಲ ಪೆÇಲೀಸರು ತನಿಖೆ ಆರಂಭಿಸಿದ್ದಾರೆ.

ಮತ್ತೊಂದು ವಂಚನೆ ಮೊನ್ನೆ ಕುಟ್ಟಿಕ್ಕೋಲ್ ಹಾಗೂ ಅದರ ಸಮೀಪದ ಪ್ರದೇಶದಲ್ಲೂ ನಡೆದಿರುವುದಾಗಿ ತಿಳಿದು ಬಂದಿದೆ. ಅಲ್ಲಿ ಕೂಡಾ ಅಂಗಡಿ ಮಾಲಕ ಇಲ್ಲದ ಸಮಯದಲ್ಲಿ ನೌಕರಿಯಿಂದ 11 ಸಾವಿರ ರೂ ಎಗರಿಸಲಾಗಿದೆ.

LEAVE A REPLY