ತಾಯಿಯೇ ನಿಮ್ಮ ಬೆಸ್ಟ್ ಫ್ರೆಂಡ್

ಬದುಕು ಬಂಗಾರ-48

ನಿಮ್ಮ ಜೀವನದಲ್ಲಿ ನಿಮ್ಮ ಮೊದಲ ಸ್ನೇಹಿತರ್ಯಾರು ಎಂಬ ಪ್ರಶ್ನೆಗೆ ಹಲವರು ಹಲವು ರೀತಿಯ ಉತ್ತರ ನೀಡಬಹುದು. ನಿಜ ಹೇಳಬೇಕೆಂದರೆ ತಾಯಿಯೇ ನಮ್ಮ ಮೊದಲ ಅತ್ಯುತ್ತಮ ಸ್ನೇಹಿತೆ. ಆ ಸ್ಥಾನವನ್ನು ಬೇರ್ಯಾರೂ ತುಂಬಲು ಅಸಾಧ್ಯ. ಆಕೆಯೊಡನೆ ನೀವು ನಿಮ್ಮ ಮನಸ್ಸಿನ ನೋವು, ದುಮ್ಮಾನಗಳನ್ನು ಮುಚ್ಚುಮರೆಯಿಲ್ಲದೆ ಹೇಳಿಕೊಳ್ಳಬಲ್ಲಿರಲ್ಲವೇನು ?

  • ನಮ್ಮ ಬಗ್ಗೆ ನೈಜ ಕಾಳಜಿ ಹೊಂದಿದವಳು ಆಕೆ : ನೀವು ಜೀವನದಲ್ಲಿ ಚೆನ್ನಾಗಿರಬೇಕೆಂದು ಮನಃಪೂರ್ವಕವಾಗಿ ಬಯಸುವವಳು ತಾಯಿ. ಶಾಲೆಯಲ್ಲಿರುವಾಗ ಅಥವಾ ನೀವು ಉದ್ಯೋಗಲ್ಲಿರುವಾಗ ನೀವು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಬೇಕು ಎಂಬುದು ಆಕೆಯ ಅದಮ್ಯ ಆಸೆ. ನಿಮ್ಮ ಯಶಸ್ಸಿಗಾಗಿ ಆಕೆ ಯಾವ ತ್ಯಾಗಕ್ಕೂ ಸಿದ್ಧ. ನಿಮ್ಮ ಯಶಸ್ಸೇ ಆಕೆಯ ಯಶಸ್ಸು ಕೂಡ. ಒಂದು ವೇಳೆ ನೀವು ವಿಫಲರಾದರೂ ನಿಮ್ಮ ಬಗ್ಗೆ ಅತೀವ ಕಾಳಜಿ ತೋರಿಸುವ ತಾಯಿ ಎಲ್ಲಾ ಸಮಯದಲ್ಲೂ ನಿಮ್ಮ ಬಳಿ ನಿಂತು ನಿಮಗೆ ಧೈರ್ಯ ತುಂಬುವವಳು.
  • ನಿಮ್ಮ ಸಮರ್ಥಕಳು ಆಕೆ : ಇತರರು ನಿಮ್ಮ ದುರ್ಲಾಭ ಪಡೆಯಲು ಯತ್ನಿಸಬಹುದು. ಅದರೆ ಆಗೆಲ್ಲ ನಿಮ್ಮ ಪರವಾಗಿ ನಿಲ್ಲುವವಳೇ ನಿಮ್ಮ ತಾಯಿ.
  • ನಿಮ್ಮನ್ನು ಅರ್ಥೈಸಬಲ್ಲವಳು : ಹೌದು, ನಿಮ್ಮ ಮತ್ತು ಆಕೆಯ ನಡುವೆ ವಯಸ್ಸಿನ ಅಂತರವಿದ್ದರೂ ಅವುಗಳನ್ನೆಲ್ಲಾ ಮೆಟ್ಟಿ ನಿಂತು ನಿಮ್ಮನ್ನು ಸರಿಯಾಗಿ ಅರ್ಥೈಸುತ್ತಾಳೆ ತಾಯಿ. ಆಕೆ ನಿಮ್ಮ ಮನಸ್ಸನ್ನು ಆಶ್ಚರ್ಯಕರವಾಗಿ ಓದಬಲ್ಲಳು. ನಿಮ್ಮ ಮುಖದ ಭಾವನೆಯಿಂದಲೇ ನಿಮ್ಮ ಮನಸ್ಸಿನಲ್ಲೇನು ಓಡುತ್ತಿದೆ ಎಂದು ತಿಳಿಯಬಲ್ಲ ಶಕ್ತಿ ತಾಯಿಗಿದೆ.
  • ಪ್ರತಿಫಲಾಕ್ಷೆಯಿಲ್ಲದವಳು : ಆಕೆ ನಿಮ್ಮನ್ನು ಸದಾ ಬೆಂಬಲಿಸುತ್ತಾಳೆ, ನಿಮ್ಮ ಮೊಗದಲ್ಲಿ ಸದಾ ನಗುವಿರಬೇಕೆಂದು ಬಯಸುತ್ತಾಳೆ ಹಾಗೂ ನೀವು ಜೀವನದಲ್ಲಿ ಸದಾ ಸಂತೋಷದಿಂದಿರಬೇಕೆಂದು ಹಂಬಲಿಸುವವಳು. ಆದರೆ ಇದಕ್ಕಾಗಿ ಆಕೆ ನಿಮ್ಮಿಂದ ಏನನ್ನೂ ನಿರೀಕ್ಷಿಸುವುದಿಲ್ಲ. ನೀವು ಚೆನ್ನಾಗಿದ್ದರೆ, ಆಕೆಗೆ ಅದುವೇ ದೊಡ್ಡ ಉಡುಗೊರೆ.
  • ವಿಶೇಷ ಕಾಳಜಿ ತೋರಿಸುವವಳು : ಬೇರೆ ಯಾರಾದರೂ ನಿಮ್ಮ ಹುಟ್ಟು ಹಬ್ಬದ ದಿನವನ್ನು ಮರೆಯಬಹುದು, ಆದರೆ ತಾಯಿ ಮಾತ್ರ ಅದನ್ನು ಮರೆಯಲಾರಳು. ನಿಮ್ಮ ಪ್ರತಿ ದಿನ ಸಂತೋಷದ ಬುಗ್ಗೆಯಾಗಬೇಕೆಂದು ಬಯಸುವವಳು ಆಕೆ.

ನಿಮ್ಮ ತಾಯಿಯೇ ನಿಮ್ಮ ಬೆಸ್ಟ್ ಫ್ರೆಂಡ್. ಇದು ನಿಮ್ಮ ಗಮನಕ್ಕೆ ಬಂದಿರಬಹುದು ಅಥವಾ ಬಂದಿರದೇ ಇರಬಹುದು. ಆದರೆ ಈ ಸತ್ಯವನ್ನು ಯಾರೂ ಅಲ್ಲಗಳೆಯಲಾರರು.