ಎಚ್ಚರ : ನಿಮ್ಮ ಕ್ರೆಡಿಟ್ ಕಾರ್ಡ್ ಮಾಹಿತಿ 6 ಸೆಕೆಂಡಲ್ಲಿ ಹ್ಯಾಕ್ ಮಾಡಬಹುದು

ಲಂಡನ್ : ನಿಮ್ಮ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಸಂಖ್ಯೆ, ಅದರ ಅವಧಿ ಕೊನೆಗೊಳ್ಳುವ ದಿನಾಂಕ ಮತ್ತು ಸೆಕ್ಯುರಿಟಿ ಕೋಡ್ ಇವುಗಳನ್ನು ಅಂದಾಜಿಸಲು ಹ್ಯಾಕರುಗಳಿಗೆ ಕೇವಲ ಆರು ಸೆಕೆಂಡುಗಳು ಸಾಕು ಎಂದು ಆನ್ಲೈನ್ ಹಣ ಪಾವತಿಗಳನ್ನು ಸುರಕ್ಷಿತಗೊಳಿಸಲೆಂದು ಇರುವ ಎಲ್ಲಾ ಸೆಕ್ಯುರಿಟಿ ಫೀಚರುಗಳನ್ನು ಬೇಧಿಸಲು ಸಫಲವಾಗಿರುವ ಕೆಲ ವಿಜ್ಞಾನಿಗಳು ಎಚ್ಚರಿಸಿದ್ದಾರೆ.

ವೀಸಾ ಪೇಮೆಂಟ್ ಸಿಸ್ಟಂನ ಲೋಪದೋಷಗಳನ್ನು ಬೊಟ್ಟು ಮಾಡಿ ತೋರಿಸಿರುವ ಇಂಗ್ಲೆಂಡಿನ ನ್ಯೂ ಕಾಸಲ್ ಯುನಿವರ್ಸಿಟಿಯ ಸಂಶೋಧಕರ ಪ್ರಕಾರ, ಡೆಬಿಟ್ ಕಾರ್ಡ್ ಮಾಹಿತಿಯನ್ನು ಪಡೆಯಲು ಹ್ಯಾಕರುಗಳು ಮಾಡುವ ಹಲವಾರು ವ್ಯರ್ಥ ಪ್ರಯತ್ನಗಳನ್ನು ತಿಳಿಯರು ಆನ್ಲೈನ್ ಪೇಮೆಂಟ್ ಜಾಲ ಯಾ ಬ್ಯಾಂಕುಗಳು ತಿಳಿಯಲು ಸಾಧ್ಯವಿಲ್ಲ. ಹೆಚ್ಚಿನ ಸಂದರ್ಭಗಳಲ್ಲಿ ಹ್ಯಾಕರುಗಳು ಆನ್ಲೈನ್ ಪೇಮೆಂಟ್ ವೆಬ್ ಸೈಟುಗಳನ್ನು ತಮ್ಮ ಕಾರ್ಯಸಾಧನೆಗೆ ಬಳಸುತ್ತಾರೆ. ಈಗಿನ  ಆನ್ಲೈನ್ ವ್ಯವಸ್ಥೆಯು ಒಂದೇ ಕಾರ್ಡಿನ ಮೇಲೆ ಬೇರೆ ಬೇರೆ ವೆಬ್ ಸೈಟುಗಳಲ್ಲಿ ನಡೆಯುವ  ಇನವ್ಯಾಲಿಡ್ ಪೇಮೆಂಟ್ ರಿಕ್ವೆಸ್ಟಗಳನ್ನು ಪತ್ತೆ ಹಚ್ಚಲು  ಅಸಾಧ್ಯವಾಗಿರುವುದರಿಂದ  ವಂಚಕರಿಗೆ ತಮ್ಮ ಕಾರ್ಯ ಸಾಧಿಸಲು ಸುಲಭವಾಗಿದೆ.

ಒಂದು ಕಾರ್ಡಿನ ಸೆಕ್ಯುರಿಟಿ ಡಾಟಾವನ್ನು ವಿವಿಧ ರೀತಿಗಳಲ್ಲ ತಯಾರಿಸಿ ಅವುಗಳನ್ನು  ವಿವಿಧ ವೆಬ್ ಸೈಟುಗಳಲ್ಲಿ ಉಪಯೋಗಿಸಿ ಹ್ಯಾಕರುಗಳು ಕೆಲವೇ ಸೆಕೆಂಡುಗಳಲ್ಲಿ ಎಲ್ಲಾ ಅಗತ್ಯ ಮಾಹಿತಿಗಳನ್ನು ಪಡೆಯುವಲ್ಲಿ ಯಶಸ್ವಿಯಾಗುತ್ತಾರೆ ಎಂದು ಈ ಸಂಶೋಧಕರು ಹೇಳಿದ್ದಾರೆ.

ಇಂತಹದೇ ಹ್ಯಾಕಿಂಗ್ ವಿಧಾನವನ್ನು ಇತ್ತೀಚೆಗೆ ತಿಳಿದು ಬಂದ ಟೆಸ್ಕೋ ಸೈಬರ್ ದಾಳಿಯಲ್ಲೂ ಉಪಯೋಗಿಸಿರಬಹುದು ಎಂದು ತನಿಖಾಕಾರರು ಅಂದಾಜಿಸಿದ್ದಾರೆ. ಕೇವಲ ವೀಸಾ ನೆಟ್ವರ್ಕ್ ಇಂತಹ ಮಾದರಿಯ ಹ್ಯಾಕಿಂಗ್ ಅಪಾಯವೆದುರಿಸುತ್ತಿದೆಯೆಂದು ಸಂಶೋಧಕರ ತಂಡ ತಿಳಿದುಕೊಂಡಿದೆ.

ಐಇಇಇ ಸೆಕ್ಯುರಿಟಿ ಎಂಡ್ ಪ್ರೈವೆಸಿ ಎಂಬ ಜರ್ನಲ್ಲಿನಲ್ಲಿ ಈ ಸಂಶೋಧನೆಯ ವಿವರಗಳು ಪ್ರಕಟವಾಗಿವೆ.