ಯುವತಿ ನಾಪತ್ತೆ

ಸಾಂದರ್ಭಿಕ ಚಿತ್ರ

ಕಾರ್ಕಳ : ಮಂಗಳೂರು ವಿಶ್ವವಿದ್ಯಾನಿಲಯದ ಎಂಕಾಂ ಪರೀಕ್ಷೆ ಕಟ್ಟಿ ಬರುವುದಾಗಿ ಹೇಳಿಹೋದ ವಿದ್ಯಾರ್ಥಿನಿ ಮನೆಗೆ ಬಾರದೆ ನಾಪತ್ತೆಯಾಗಿದ್ದಾಳೆ. ಕಾರ್ಕಳ ತಾಲೂಕು ಹೆಬ್ರಿ ಚಾರ ಗ್ರಾಮದ ಭುಜಂಗ ಶೆಟ್ಟಿ ಎಂಬವರ ಮಗಳು ಸಿಂಚನ (23) ಎಂಬವಳು ಶನಿವಾರ ಬೆಳಿಗ್ಗೆ ಸ್ನಾತಕೋತ್ತರ ಪದವಿ ಪರೀಕ್ಷೆ ಕಟ್ಟಿ ಬರುವುದಾಗಿ ಹೇಳಿ ಹೋದವಳು ಮರಳಿ ಬಾರದೆ ನಾಪತ್ತೆಯಾಗಿದ್ದಾಳೆ.

ಈ ಕುರಿತು ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.