ಕಾಸರಗೋಡು ಪ್ರಿಯತಮನ ಹುಡುಕಿ ಬಂದ ಮುಂಬಯಿ ಯುವತಿ ವಾಪಸ್

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಎರಡೂವರೆ ಲಕ್ಷ ರೂ ಪಡೆದು ವಂಚಿಸಿ ಪರಾರಿಯಾದ ಪ್ರಿಯತಮನನ್ನು ಹುಡುಕಿ ಕಾಸರಗೋಡಿಗೆ ಬಂದ ಮುಂಬಯಿ ನಿವಾಸಿ ಯುವತಿ ಊರಿಗೆ ಮರಳಿದಳು. ಮುಂಬಯಿ ಬಾರೊಂದರ ನರ್ತಕಿ ಗುರುದಾಸಪುರ ನಿವಾಸಿ ವರ್ಷಾ  26  ಎಂಬಾಕೆ ಬುಧವಾರ ಕಾಸರಗೋಡಿಗೆ ಆಗಮಿಸಿದ್ದಳು. ಆರು ವರ್ಷಗಳಿಂದ ಜತೆಗೆ ವಾಸಿಸಿ ವಿಶ್ವಾಸಗಳಿಸಿದ ಕಾಸರಗೋಡು ನಿವಾಸಿಯಾದ ಯುವಕ ಇತ್ತೀಚೆಗೆ ಎರಡೂವರೆ ಲಕ್ಷ ರೂ ಪಡೆದು ಪರಾರಿಯಾಗಿದ್ದನು. ಈ ಹಿನ್ನೆಲೆಯಲ್ಲಿ ಆತನನ್ನು ಹುಡುಕಿ ವರ್ಷಾ ಕಾಸರಗೋಡಿಗೆ ಆಗಮಿಸಿದ್ದಳು. ಆದರೆ ಯುವಕ ಕರ್ನಾಟಕದಲ್ಲಿ ತಲೆಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಪತಿ ಬಿಟ್ಟ ಬಳಿಕ ಮುಂಬಯಿ ಬಾರೊಂದರಲ್ಲಿ ನರ್ತಕಿಯಾಗಿದ್ದ ವರ್ಷಾಳ ಸ್ನೇಹ ಸಂಪಾದಿಸಿದ ಕಾಸರಗೋಡಿನ ಯುವಕ ಆರು ವರ್ಷಗಳ ಕಾಲ ಆಕೆಯ ಜತೆಗೆ ಇದ್ದನು.