ಯೋಗ ಪಾಶವೀ ಕೃತ್ಯ : ಪೋಪ್ ಸಂಸ್ಥಾನ ಬಣ್ಣನೆ

ವ್ಯಾಟಿಕನ್ : ವ್ಯಾಟಿಕನ್ ನಗರದ ಮುಖ್ಯ ಭೂತೋಚ್ಛಾಟಕರೊಬ್ಬರಾದ ಫಾದರ್ ಸೆಸಾರೆ ಟ್ರುಖುಯಿ ಎಂಬವರು  ಯೋಗ ಮತ್ತು ಕಾಲ್ಪನಿಕ ಕಾದಂಬರಿಗಳ ವಿರುದ್ಧ ಕೆಂಡ ಕಾರಿದ್ದು ಅವುಗಳು `ಸೈತಾನನ’ ಕೃತ್ಯಗಳು ಎಂದು ಬಣ್ಣಿಸಿದ್ದಾರೆ. “ಹ್ಯಾರಿ ಪಾಟರ್ ಓದಿದಾಗ ಆಗುವಂತೆ ಯೋಗ ನಮ್ಮನ್ನು ಕೆಟ್ಟದ್ದರ ಕಡೆಗೆ ಒಯ್ಯುತ್ತದೆ” ಎಂದು ಅವರು ವಾದಿಸುತ್ತಿದ್ದಾರೆ.

ಇತ್ತೀಚಿಗಿನ ದಿನಗಳಲ್ಲಿ ವಿಶ್ವದಾದ್ಯಂತ ಹಲವಾರು ಜನರನ್ನು ದುಷ್ಟ ಶಕ್ತಿಗಳು ನಿಯಂತ್ರಿಸುತ್ತಿರುವ ವಿಚಾರ ಕ್ಯಾಥೋಲಿಕ್ ಚರ್ಚ್ ಗಮನಕ್ಕೆ ಬಂದಿದೆ ಎಂದು ವಿವರಿಸುವ ಅವರು ವಿರಾಮ ಕಾಲದಲ್ಲಿ ಜನರು ನೋಡುವ ಹ್ಯಾರಿ ಪಾಟರ್  ಚಲನಚಿತ್ರಗಳು ಹಾಗೂ ಯೋಗÀವನ್ನು ಅಭ್ಯಾಸ ಮಾಡುತ್ತಿರುವುದೇ ಇದಕ್ಕೆ  ಕಾರಣ ಎಂದು  ಹೇಳಿಕೊಂಡಿದ್ದಾರೆ.

ಇತ್ತೀಚೆಗೆ ರೋಮ್ ನಗರದಲ್ಲಿ ಆಯೋಜಿಸಲ್ಪಟ್ಟಿದ್ದ ಕ್ಯಾಥೊಲಿಕ್ ಅಧಿಕಾರಿಗಳು ಮತ್ತಿತರ ಪ್ರತಿನಿಧಿಗಳ ಸಭೆಯೊಂದರಲ್ಲಿ ಭಾಗವಹಿಸಿದ್ದ ಪ್ರೊಫೆಸರ್ ಗಿಸೆಪ್ಪೆ ಫೆರ್ರಾರಿ “ಮಾಂತ್ರಿಕರನ್ನು ವೈಭವೀಕರಿಸುವ ಶೋಗಳು ಹಾಗೂ ಯೋಗ ಮುಂತಾದ ಚಟುವಟಿಕೆಗಳು `ಸೈತಾನ ಶಕ್ತಿಗಳನ್ನು ಬರಮಾಡಿಸಿಕೊಳ್ಳುತ್ತವೆ” ಎಂದರು.