ಬೆಂಗಳೂರಿಗೆ ನೀರು ಒದಗಿಸಲು ಎತ್ತಿನಹೊಳೆ ಯೋಜನೆ ವಿಸ್ತರಣೆ ?

ಬೆಂಗಳೂರು : ಎತ್ತಿನಹೊಳೆ ಯೋಜನೆಯನ್ನು ವಿಸ್ತರಿಸಿ ನೇತ್ರಾವತಿ ನದಿ ನೀರನ್ನು ಬೆಂಗಳೂರಿಗೆ ಹರಿಸುವಂತೆ  ಮಾಡುವ ಬಗೆಗಿನ ಕಾರ್ಯಸಾಧ್ಯತಾ ವರದಿಯೊಂದನ್ನು ಸೋಮವಾರ ಇಂಡಿಯನ್ ಇನಸ್ಟಿಟ್ಯೂಟ್ ಆಫ್ ಸಾಯನ್ಸ್ ಇದರ ಇಂಜಿನಿಯರುಗಳು ಮತ್ತು ತಜ್ಞರು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ ಜೆ ಜಾರ್ಜ್ ಹಾಗೂ ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳ ಮಂದೆ ಪ್ರಸ್ತುತಪಡಿಸಿದ್ದಾರೆ.

ಆದರೆ ಈ ಪ್ರಸ್ತಾವಿತ ಯೋಜನೆ ಇನ್ನೂ ಅನುಮೋದನೆಗೊಂಡಿಲ್ಲ ಹಾಗೂ ಅದರ ಬಗ್ಗೆ ಏನನ್ನೂ ಈಗ ಹೇಳುವ ಹಾಗಿಲ್ಲ ಎಂದು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್ ತಿಳಿಸಿದ್ದಾರೆ. ಇದು ಎತ್ತಿನಹೊಳೆ ಯೋಜನೆಯ ಮುಂದುವರಿದ ಭಾಗವೇ ಎಂದು ಪ್ರಶ್ನಿಸಿದಾಗ “ಪ್ರಾಯಶಃ” ಎಂದು ಹೇಳಿದ ಅವರು, “ನೇತ್ರಾವತಿ ನೀರನ್ನು ಎತ್ತಿನಹೊಳೆ ತನಕ ಪಂಪ್ ಮಾಡಬಹುದು. ಎತ್ತಿನಹೊಳೆಯಲ್ಲಿ ಸಾಕಷ್ಟು ನೀರಿಲ್ಲದೇ ಇರುವ ಸಂದರ್ಭ ಅಲ್ಲಿನ  ಪಂಪಿಂಗ್ ಉಪಕರಣಗಳನ್ನು ಮತ್ತು ಪೈಪ್ ಲೈನುಗಳನ್ನು ನೇತ್ರಾವತಿಯಿಂದ ನೀರೆಳೆಯಲು ಬಳಸಬಹುದು” ಎಂದು ಹೇಳಿದ್ದಾರೆ.

ಈ ಯೋಜನೆಯ ಕಾರ್ಯಸಾಧ್ಯತಾ ವರದಿಯನ್ನು ತಯಾರಿಸಲು ಇಂಡಿಯನ್ ಇನಸ್ಟಿಟ್ಯೂಟ್ ಆಫ್ ಸಾಯನ್ಸಸ್ ಇಲ್ಲಿನ ಸಿವಿಲ್ ಇಂಜಿನಿಯರಿಂಗ್  ಇಲಖೆಯ  ಪ್ರೊ ಟಿ ಜಿ ಸೀತರಾಂ ಅವರಿಗೆ  ಹೇಳಲಾಗಿತ್ತು ಎಂದು  ಬೆಂಗಳೂರು ಜಲ ಮಂಡಳಿ ಅಧ್ಯಕ್ಷ ತುಷಾರ್ ಗಿರಿನಾಥ್ ತಿಳಿಸಿದ್ದಾರೆ. “ನೀರಿನ ಬೇಡಿಕೆ ಹೆಚ್ಚುತ್ತಿದೆ. 2050ರ ತನಕದ ಅವಶ್ಯಕತೆಗಳ ಬಗ್ಗೆ ನಾವು ಗಮನ ಹರಿಸಬೇಕಾಗುತ್ತದೆ. ಹಾಸನ, ಬೆಂಗಳೂರು ನಗರ ಮತ್ತು ಗ್ರಾಮೀಣ ಭಾಗಗಳು  ಹಾಗೂ ಚಿಕ್ಕಬಳ್ಳಾಪುರಕ್ಕೆ ನೇತ್ರಾವತಿ ನೀರು ಪೂರೈಸಲ ಸರಕಾರ ಆಸಕ್ತವಾಗಿದೆ, ಲಿಂಗನಮಕ್ಕಿ ನೀರನ್ನೂ ಬೆಂಗಳೂರಿಗೆ ಹರಿಸುವ ಬಗ್ಗೆ ಚಿಂತಿಸಲಾಗುತ್ತಿದೆ” ಎಂದು ಅವರು ಹೇಳಿದ್ದಾರೆ.

ಆದರೆ ಸಭೆಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳು ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ್ದು ಸಚಿವ ಜಾರ್ಜ್ ಹಾಗೂ ಐಐಎಸ್ಸಿಯ ಪ್ರೊ ಸೀತಾರಾಂ ಅವರೂ ಪ್ರತಿಕ್ರಿಯೆಗೆ ಲಭ್ಯರಾಗಿಲ್ಲ.

ವಿರೋಧ : ಎತ್ತಿನಹೊಳೆ ಯೋಜನೆಯನ್ನು ವಿಸ್ತರಿಸಿ ನೇತ್ರಾವತಿ ನೀರನ್ನು ಬೆಂಗಳೂರು ಮುಂತಾದೆಡೆ ಹರಿಸುವ ಪ್ರಸ್ತಾವನೆಗೆ ಇಂಡಿಯನ್ ಇನಸ್ಟಿಟ್ಯೂಟ್ ಆಫ್  ಸಾಯನ್ಸ್ ಸಂಸ್ಥೆಯ ಇತರ ತಜ್ಞರಿಂದ ವಿರೋಧ ವ್ಯಕ್ತವಾಗಿದೆ.

ನೇತ್ರಾವತಿ ನೀರನ್ನು ಬೆಂಗಳೂರಿನತ್ತ ಹರಿಸುವ ಯೋಜನೆಯನ್ನು ಬೆಂಬಲಿಸುತ್ತಿರುವವರು ಗುಜರಾತಗೆ ಭೇಟಿ ನೀಡಿ ಅಲ್ಲಿ ಜನರು ನದಿ ನೀರು ತಿರುಗಿಸಿದ ಸರಕಾರವನ್ನು ಹೇಗೆ ದೂಷಿಸುತ್ತಿದ್ದಾರೆಂದು ತಿಳಿಯಬೇಕು” ಎಂದು ಹೇಳುವ ಮುಲಕ  ನೇತ್ರಾವತಿ ಮತ್ತು ಲಿಂಗನಮಕ್ಕಿ ನೀರನ್ನು ಬೆಂಗಳೂರಿಗೆ ಹರಿಸುವ ಪ್ರಸ್ತಾಪಕ್ಕೆ ಬಲವಾಗಿ ವಿರೋಧ ವ್ಯಕ್ತಪಡಿಸುತ್ತಾರೆ ಸೆಂಟರ್ ಫಾರ್ ಇಕಲಾಜಿಕಲ್ ಸಾಯನ್ಸಸ್ ಇಲ್ಲಿನ ಪ್ರೊ ಟಿ ವಿ ರಾಮಚಂದ್ರ.