ಎತ್ತಿನಹೊಳೆ : ರಾಜ್ಯ ಸರ್ಕಾರದ ಮನವಿ ತಿರಸ್ಕರಿಸಿದ ಎನ್ಜಿಟಿ

ಸಾಂದರ್ಭಿಕ ಚಿತ್ರ

ನವದೆಹಲಿ : ಹಾಸನ ಜಿಲ್ಲೆಯ ಸಕಲೇಶಪುರಕ್ಕೆ ಹತ್ತಿರದಲ್ಲಿ ನಡೆಯುತ್ತಿರುವ ಎತ್ತಿನಹೊಳೆ ಪ್ರಾಜೆಕ್ಟಿಗೆ ವಿರೋಧ ವ್ಯಕ್ತಪಡಿಸಲಾಗಿರುವ ಎಲ್ಲ ದೂರರ್ಜಿಗಳ ವಿಚಾರಣೆ  ಏಕಪೀಠವೊಂದರಲ್ಲಿ ನಡೆಸಬೇಕೆಂಬ ಕರ್ನಾಟಕ ರಾಜ್ಯ ಸರ್ಕಾರ ಮನವಿಯನ್ನು ರಾಷ್ಟ್ರೀಯ ಹಸಿರು ಟ್ರಿಬ್ಯೂನಲ್ ನಿನ್ನೆ ತಳ್ಳಿ ಹಾಕಿದೆ. ಪ್ರಸಕ್ತ ಈ ಯೋಜನೆಗೆ ಸಂಬಂಧಿಸಿದ ಮೂರು ಪ್ರತ್ಯೇಕ ಅರ್ಜಿಗಳನ್ನು ಎನ್‍ಜಿಟಿಯ ಮೂರು ಪ್ರತ್ಯೇಕ ಪೀಠಗಳಲ್ಲಿ ವಿಚಾರಿಸಲಾಗುತ್ತಿದೆ.