ಎತ್ತಿನಹೊಳೆ ಕೇಸು : ಪ್ರತಿಕ್ರಿಯಿಸಲು ರಾಜ್ಯ ಸರ್ಕಾರಕ್ಕೆ ಎನ್ಜಿಟಿ ಸೂಚನೆ

ನವದೆಹಲಿ : ಎತ್ತಿನಹೊಳೆ ಯೋಜನೆಯಿಂದ ಪಡೆಯಲಾದ ನೀರನ್ನು ಹೇಮಾವತಿ ಪ್ರವಾಹ ಪ್ರದೇಶದಲ್ಲಿ ಶೇಖರಿಸಲು ಟ್ಯಾಂಕ್ ನಿರ್ಮಿಸುವ ಯೋಜನೆ ಬಗ್ಗೆ ರಾಜ್ಯ ಸರ್ಕಾರಕ್ಕೆ ಕೇಳಲಾದ ಪ್ರಶ್ನೆಯೊಂದಕ್ಕೆ ತಕ್ಷಣ ಪ್ರತಿಕ್ರಿಯೆ ನೀಡುವಂತೆ ರಾಷ್ಟ್ರೀಯ ಹಸಿರು ಪ್ರಾಧಿಕರಣದ(ಎನ್‍ಜಿಟಿ) ಪ್ರಧಾನ ಪೀಠ ನಿನ್ನೆ ಕರ್ನಾಟಕ ಸರ್ಕಾರಕ್ಕೆ ನಿರ್ದೇಶಿಸಿದೆ.

ಮುಂದಿನ 10 ದಿನದೊಳಗೆ ಈ ಪ್ರಶ್ನೆಗೆ ಉತ್ತರಿಸಬೇಕು ಎಂದಿರುವ ಪೀಠ, ಈ ಸಂಬಂಧ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಡಿಸೆಂಬರ್ 16ಕ್ಕೆ ಮುಂದೂಡಿತು.

ಸಕಲೇಶಪುರದಲ್ಲಿ ಹೇಮಾವತಿ ಪ್ರವಾಹ ಪ್ರದೇಶದ ದೊಡ್ಡ ಸಾಗರದಲ್ಲಿ ನೀರು ಶೇಖರಣೆ ಮಾಡಿ ಅಲ್ಲಿಂದ ಇತರ ಪ್ರದೇಶಗಳಿಗೆ ನೀರು ಪೂರೈಸುವುದು ವ್ಯವಸ್ಥೆ ನಿರ್ಮಾಣ ಕಾನೂನುಬಾಹಿರ ಎಂದು ಪರಿಸರವಾದಿ ಕೆ ಎನ್ ಸೋಮಶೇಖರ ಪ್ರಾಧಿಕರಣಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ವಿವರಿಸಿದ್ದಾರೆ.