ಎತ್ತಿನಹೊಳೆ ಸಭೆ : ಬರಿಗೈಯ್ಯಲ್ಲಿ ಮರಳಿದ ನಮ್ಮ ಜನಪ್ರತಿನಿಧಿಗಳು

ನೇತ್ರಾವತಿ ನದಿ ತಿರುವಿನ ಎತ್ತಿನಹೊಳೆ ಎಂಬ ಬ್ರಹ್ಮಾಂಡ ಭ್ರಷ್ಟಾಚಾರದ ದುಷ್ಟ ಯೋಜನೆಯ ಕಾಮಗಾರಿ ಅರ್ಧಾಂಶದಷ್ಟು ಮುಗಿಯುತ್ತಾ ಬಂದಿದೆ  ಉಳಿದ ಕಾಮಗಾರಿ ಕೋರ್ಟ್ ತಡೆಯಾಜ್ಞೆ ಇದ್ದರೂ ತ್ವರಿತಗತಿಯಲ್ಲಿ ಸಾಗುತ್ತಿದೆ  ಹಾಗಿದ್ದೂ ಈ ಬಗ್ಗೆ ಕಾನೂನು ಹೋರಾಟ ಮಾಡದ ಮಂದಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಸಂಘಟನೆಯ ನಾಯಕರುಗಳಿಗೆ ಪ್ರಸಾದ ನೀಡಿ ಸಂತೈಸಲು ಕರೆದ ಸಭೆಗೆ ಬೆಂಗಳೂರಿಗೆ ತಮ್ಮ ಪಟಾಲಾಂ ಸಹಿತ ಹೋಗಿ ಬರಿಗೈಯಲ್ಲಿ ಕೃತಾರ್ಥರಾಗಿ ಮರಳಿ ಬಂದಿದ್ದಾರೆ  ಎಲ್ಲಾ ಸೂರೆ ಹೋದ ಮೇಲೆ ಈಗ ಯಾವ ಪುರುಷಾರ್ಥಕ್ಕೆ ಈ ಸಭೆ   ಈ ಸಭೆಗೆ ಬಹಿಷ್ಕಾರ ಹಾಕಬೇಕಾದ ತಥಾಕಥಿತ ನಾಯಕರು ಕೇವಲ ಸ್ವಾರ್ಥ ಹಾಗೂ ಪ್ರಚಾರಕ್ಕಾಗಿ ತಾ ಮುಂದು ನಾ ಮುಂದು ಎಂಬಂತೆ ಮುಖ್ಯಮಂತ್ರಿಯೆದುರು ಕೋಣಗಳಂತೆ ತಲೆಯಾಡಿಸಿ ಫೋಟೋ ಕ್ಲಿಕ್ಕಿಸಿ ಕೊಳ್ಳುವ ಚಪಲ ಚೆನ್ನಿಗರಾಯಂತೆ ವರ್ತಿಸುತ್ತಿರುವುದು ತುಳುನಾಡಿನ ದುರಂತ. ಇಂತಹ ದ್ವಿಮುಖ ಸ್ವಭಾವದಿಂದಲೇ ದ ಕ ಜಿಲ್ಲೆ ವಿವಿಧ ಯೋಜನೆಗಳಿಂದ ವಿನಾಶದಂಚಿಗೆ ತಲುಪುವುದರಲ್ಲಿ ಸಂದೇಹವಿಲ್ಲ

  • ಅವಿನಾಶ್ ಮೂಡಬಿದ್ರೆ