ಒಂದು ವರ್ಷದ ರೊಬೊಟಿಕ್ ಸರ್ಜರಿ ಪೂರ್ಣಗೊಳಿಸಿದ ಯೆನೆಪೋಯ ಆಸ್ಪತ್ರೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ರೊಬೊಟಿಕ್ ಸರ್ಜರಿಯ ಕೊಡುಗೆ ನೀಡಿದ ನಗರದ ಏಕೈಕ ಆಸ್ಪತ್ರೆಯಾದ ದೇರಳಕಟ್ಟೆಯ ಯೆನೆಪೋಯ ಆಸ್ಪತ್ರೆಯು ಒಂದು ವರ್ಷದ ರೊಬೊಟಿಕ್ ಸರ್ಜರಿಯನ್ನು ಪೂರ್ಣಗೊಳಿದ್ದು, ಒಂದು ವರ್ಷದ ಅಲ್ಪ ಅವಧಿಯಲ್ಲಿ ಒಟ್ಟು 130 ಸರ್ಜರಿಗಳನ್ನು ಮಾಡಲಾಗಿದೆ.

ರೋಬೋಟಿಕ್ ಸರ್ಜರಿ ಅನುಭವಗಳ ಮಾಹಿತಿ ನೀಡಿದ ಯೆನೆಪೋಯ ಆಸ್ಪತ್ರೆಯ ಗ್ರಂಥಿ ವಿಜ್ಞಾನ ವಿಭಾಗದ ಡಾ ಜಲಾಲುದ್ದೀನ್ ಅಕ್ಬರ್ “ರೋಬೋಟಿಕ್ ಸರ್ಜರಿ ಅತ್ಯಂತ ಆಧುನಿಕವಾಗಿದೆ. ತಾಂತ್ರಿಕವಾಗಿ ಉನ್ನತವಾದುದು ಮತ್ತು ಸುರಕ್ಷಿತ ಶಸ್ತ್ರ ಚಿಕಿತ್ಸಾ ವಿಧಾನ. ಈ ಸರ್ಜರಿಯನ್ನು ಉನ್ನತ ತರಬೇತು ಪಡೆದ ಮತ್ತು ನುರಿತ ಸರ್ಜನುಗಳಿಂದ ನೆರವೇರಿಸಲಾಗಿದೆ. ಈ ವ್ಯವಸ್ಥೆ ಅಸ್ಥಿತ್ವದಲ್ಲಿರುವ ಲ್ಯಾಪರೊಸ್ಕೋಪಿ ವ್ಯವಸ್ಥೆಗಿಂತ ಶ್ರೇಷ್ಟವಾದುದು. ಈ ಸರ್ಜರಿಯು ರೋಗಿಗಳಿಗೆ ಮಾತ್ರವಲ್ಲ ಶಸ್ತ್ರಚಿಕಿತ್ಸಕರಿಗೂ ಪ್ರಯೋಜನಕಾರಿಯಾಗಿದ್ದು, ಶಸ್ತ್ರಚಿಕಿತ್ಸಕರು ಕ್ಲಿಷ್ಟಕರ ಪ್ರಮುಖ ಶಸ್ತ್ರಚಿಕಿತ್ಸೆಗಳನ್ನು ನೆರವೇರಿಸಲು ಅವರ ಸಾಮಥ್ರ್ಯಗಳನ್ನು ವೃದ್ದಿಸುತ್ತದೆ. ಇದೇ ವೇಳೆ ಸಣ್ಣ ಕತ್ತರಿ, ಕಡಿಮೆ ನೋವು, ವೇಗವಾಗಿ ಗುಣಮುಖ, ಕಡಿಮೆ ಅವಧಿಯ ಆಸ್ಪತ್ರೆ ತಂಗುವಿಕೆ, ಸಾಮಾನ್ಯ ಚಟುವಟಿಕೆಗಳತ್ತ ಶೀಘ್ರ ಮರಳುವಿಕೆ ಇನ್ನಿತರ ಪ್ರಯೋಜನಗಳು ರೋಗಿಗಳ ಪಾಲಿಗೆ ದಕ್ಕುತ್ತದೆ ಎಂದು ಡಾ ಜಲಾಲುದ್ದೀನ್ ಅಕ್ಬರ್ ವಿವರಿಸಿದ್ದಾರೆ.

ರೋಬೋಟಿಕ್ ಸರ್ಜರಿ ಮಾಡುವ ಆಸ್ಪತ್ರೆಗಳಲ್ಲಿ ಯೆನೆಪೋಯ ಆಸ್ಪತ್ರೆ ಇಡೀ ದೇಶದಲ್ಲಿ 47 ಆಸ್ಪತ್ರೆಗಳಲ್ಲಿ ಒಂದಾಗಿದೆ ಮತ್ತು ಮಂಗಳೂರಿನ ಏಕೈಕ ಆಸ್ಪತ್ರೆಯಾಗಿದೆ. ಒಂದು ವರ್ಷದಲ್ಲಿ ನಡೆದ ಸುಮಾರು 130 ಸರ್ಜರಿಗಳಲ್ಲಿ ಕರ್ನಾಟಕದಾದ್ಯಂತದ, ಉತ್ತರ ಕೇರಳ, ಗೋವಾ, ಮಹಾರಾಷ್ಟ್ರದ ರೋಗಿಗಳು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಇಷ್ಟು ಮಾತ್ರವಲ್ಲದೆ ಮಧ್ಯ ಪೂರ್ವ ಮತ್ತು ಆಫ್ರಿಕಾದ ರೋಗಿಗಳಿಗೂ ಚಿಕಿತ್ಸೆ ನೀಡಲಾಗಿದೆ ಎಂದು ಡಾ ಜಲಾಲುದ್ದೀನ್ ಅಕ್ಬರ್ ವಿವರಿಸಿದ್ದಾರೆ.