ಕೋಳಿ ತಿಂದು ದೇವಸ್ಥಾನಕ್ಕೆ ಭೇಟಿ ನೀಡಿದ ರಾಹುಲ್ : ಯಡ್ಡಿ ಟೀಕೆ

ಬೆಂಗಳೂರು : ಉತ್ತರ ಕರ್ನಾಟಕ ಪ್ರವಾಸದಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಜವಾರಿ  ಕೋಳಿ ಪದಾರ್ಥ ಸೇವಿಸಿ  ನಂತರ ದೇವಸ್ಥಾನವೊಂದಕ್ಕೆ ಭೇಟಿ ನೀಡಿದ್ದಾರೆ ಎಂದು ಆರೋಪಿಸಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ ಎಸ್ ಯಡ್ಯೂರಪ್ಪ ಅವರು ಕಾಂಗ್ರೆಸ್ ಅಧ್ಯಕ್ಷರ ವಿರುದ್ಧ ಹರಿಹಾಯ್ದಿದ್ದಾರೆ.

“ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗೆ  ಮೀನು ಪದಾರ್ಥ ಸೇವಿಸಿ ಧರ್ಮಸ್ಥಳ ದೇವಸ್ಥಾನಕ್ಕೆ ಭೇಟಿ ನೀಡಿದ್ದು ಒಂದೆಡೆಯಾದರೆ, ಇನ್ನೊಂದೆಡೆ ಈಗ ರಾಹುಲ್ ಗಾಂಧಿ ಅವರು ಜವಾರಿ ಕೋಳಿ ತಿಂದು ನರಸಿಂಹ ಸ್ವಾಮಿ ದೇಗುಲಕ್ಕೆ ಭೇಟಿ ನೀಡಿದ್ದಾರೆ” ಎಂದು ಯಡ್ಯೂರಪ್ಪ ಟ್ವೀಟ್ ಮಾಡಿದ್ದಾರೆ.

“ಕಾಂಗ್ರೆಸ್ ಸತತವಾಗಿ ಏಕೆ ಹಿಂದೂಗಳ ಭಾವನೆ ನೋಯಿಸುತ್ತಿದೆ ?  ಎಲ್ಲರನ್ನೂ ಸಮಾನವಾಗಿ ಕಾಣುವುದು ಸಮಾಜವಾದ ಆದರೆ ನಿಮ್ಮದು ಮಜಾವಾದ” ಎಂದು ಯಡ್ಯೂರಪ್ಪ ತಮ್ಮ ಇನ್ನೊಂದು ಟ್ವೀಟಿನಲ್ಲಿ ಹೇಳಿದ್ದಾರೆ.

 

LEAVE A REPLY