ಯಡಿಯೂರಪ್ಪ ಆಪ್ತ ಸಹಾಯಕ ಸಂತೋಷಗೆ ನಿರೀಕ್ಷಣಾ ಜಾಮೀನು

ಬೆಂಗಳೂರು : ವಿಧಾನ ಪರಿಷತ್ತು ವಿಪಕ್ಷ ನಾಯಕ ಈಶ್ವರಪ್ಪರ ಆಪ್ತ ಸಹಾಯಕ ವಿನಯ್ ಅಪಹರಣ ಯತ್ನ ನಡೆಸಿದ ಪ್ರಕರಣದ ಆರೋಪಿ ಯಾನೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪರ ಆಪ್ತ ಸಹಾಯಕ ಹಾಗೂ ಸಂಬಂಧಿ ಎನ್ ಆರ್ ಸಂತೋಷಗೆ ಸ್ಥಳೀಯ ಕೋರ್ಟೊಂದು ನಿನ್ನೆ ನಿರೀಕ್ಷಣಾ ಜಾಮೀನು ನೀಡಿದೆ. ವಿನಯ್ ಮೇ 11ರಂದು ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಬಳಿಕ ಸಂತೋಷ್ ತಲೆಮರೆಸಿಕೊಂಡಿದ್ದ. ಈ ಮಧ್ಯೆ ಪೊಲೀಸರು ಈತನ ವಿರುದ್ಧ ಲುಕೌಟ್ ನೋಟಿಸು ಜಾರಿ ಮಾಡಿದ್ದರು. ಎಂಟು ಮಂದಿಯ ಗ್ಯಾಂಗೊಂದು ಇಸ್ಕಾನ್ ಟೆಂಪಲ್ ಬಳಿಯಿಂದ ವಿನಯ್ ಅಪಹರಣ ನಡೆಸಿತ್ತು ಎಂದು ದೂರಲಾಗಿತ್ತು.