ಕೋರ್ ಕಮಿಟಿ ಸಭೆ ರದ್ದು ಮಾಡಿದ ಯಡ್ಡಿ

ಶೋಭಾ ಹಸ್ತಕ್ಷೇಪಕ್ಕೆ ವಿರೋಧ

ಬೆಂಗಳೂರು : ರಾಜ್ಯ ಬಿಜೆಪಿ ವ್ಯವಹಾರದಲ್ಲಿ ತನ್ನ ಪರಮಾಪ್ತೆ ಉಡುಪಿ ಸಂಸದೆ ಶೋಭಾ ಕರಂದ್ಲಾಜೆಯ `ಹಸ್ತಕ್ಷೇಪ’ ಹೆಚ್ಚಾಗಿದ್ದು, ಈ ಹಿನ್ನೆಲೆಯಲ್ಲಿ ಪಕ್ಷೀಯರಿಂದ ತನ್ನ ವಿರುದ್ಧ ಟೀಕೆಗಳ ಸುರಿಮಳೆಯಾಗುವ ಸಾಧ್ಯತೆ ಬಗ್ಗೆ ನಿರೀಕ್ಷಿಸಿದ್ದ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಜನವರಿ 2ರಂದು ನಡೆಯಬೇಕಿದ್ದ ಬಿಜೆಪಿ ಕೋರ್ ಕಮಿಟಿ ರದ್ದುಗೊಳಿಸಿರುವುದು ಬೆಳಕಿಗೆ ಬಂದಿದೆ.

ರಾಜ್ಯ ಬಿಜೆಪಿ ವ್ಯವಹಾರದಲ್ಲಿ ಕರಂದ್ಲಾಜೆ ಪದೇಪದೇ ಮೂಗು ತೂರಿಸುತ್ತಿದ್ದು, ಇದರಿಂದ ಪಕ್ಷದೊಳಗಿನ ಕೆಲವು ಹಿರಿಯ ನಾಯಕರು ಅಸಮಾಧಾನಗೊಂಡಿರುವುದಲ್ಲದೆ ಯಡ್ಡಿ ವಿರುದ್ಧ ಕತ್ತಿಮಸೆಯುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.

ಈ ವಿಷಯ ಹಿಂದಿನ ಸಭೆಯಲ್ಲಿ ಪ್ರಸ್ತಾವವಾಗಿತ್ತು. ಆದರೆ ಅದನ್ನೆಲ್ಲ ರಾಜ್ಯಾಧ್ಯಕ್ಷ ಕೇರೇ ಮಾಡಿಲ್ಲ. ಬಳಿಕ ವಿರೋಧಿ ಬಣದ ಕೋಪ ನೆತ್ತಿಗೇರಿದೆ ಎಂದು ಪಕ್ಷದೊಳಗಿನವರೇ ಹೇಳಿಕೊಂಡಿದ್ದಾರೆ.